ಕಲಬುರಗಿ | ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ತಕ್ಷಣ ನಿಲ್ಲಬೇಕು : ಮಹೇಶ್ವರಿ ವಾಲಿ
ಕಲಬುರಗಿ: ಭ್ರಷ್ಟಾಚಾರ ಮುಕ್ತ ಆಳಂದ ನಮ್ಮ ಹಕ್ಕು, ಅಭಿವೃದ್ಧಿ ಹೆಸರಿನಲ್ಲಿ ನಡೆಯುತ್ತಿರುವ ಲೂಟಿ ತಕ್ಷಣ ನಿಲ್ಲಬೇಕು ಎಂದು ಜೆಡಿಎಸ್ ನಾಯಕಿ ಮಹೇಶ್ವರಿ ಎಸ್.ವಾಲಿ ತಿಳಿಸಿದರು.
ಆಳಂದ ಪಟ್ಟಣದಲ್ಲಿ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಶಾಸಕ ಸುಭಾಷ ಗುತ್ತೇದಾರರ ದುರಾಡಳಿತವನ್ನು ಹಾಲಿ ಶಾಸಕ ಬಿ.ಆರ್.ಪಾಟೀಲ ಮುಂದುವರೆಸಿದ್ದಾರೆ ಆರೋಪಿಸಿದರು.
ಕಳೆದ ವಾರ ತಾಲೂಕಿನ ಹಳ್ಳಿಗಳಾದ ತೀರ್ಥತಾಂಡಾ, ಕಡುಕಿ, ಸರಸಂಬಾ, ಕೊರಳ್ಳಿ, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ, ಪಡಸಾವಳಿ ರಸ್ತೆಗಳಿಗೆ ಭೇಟಿ ನೀಡಿ ವಾಸ್ತವ ಪರಿಶೀಲನೆ ನಡೆಸಿದಾಗ ಭ್ರಷ್ಟಾಚಾರದ ಭಯಾನಕ ನಿಜಾಂಶಗಳು ಕಾಣಿಸಿಕೊಂಡಿದೆ ಎಂದು ತಿಳಿಸಿದರು.
“ತಾಲೂಕಿನ ಪ್ರಮುಖ ರಸ್ತೆ ಕಾಮಗಾರಿ ಕೇವಲ ಎರಡೇ ತಿಂಗಳಲ್ಲಿ ನಾಶವಾಗಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಕಾಮಗಾರಿ ಗುಣಮಟ್ಟದ ಕೊರತೆಯನ್ನು ಬಹಿರಂಗಪಡಿಸುತ್ತದೆ” ಎಂದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮುಖಂಡ ವೆಂಕಟೇಶ ರಾಠೋಡ ಮತ್ತು ಅಮಿರ್ ಅನ್ಸಾರಿ ಉಪಸ್ಥಿತರಿದ್ದರು.