×
Ad

ಕಲಬುರಗಿ | ವಕ್ಫ್ ತಿದ್ದುಪಡಿ ಕಾಯ್ದೆ ಹಿಂಪಡೆಯದಿದ್ದರೆ ಉಗ್ರ ಹೋರಾಟ: ಸುಲೇಮಾನ್ ಖಾನ್

Update: 2025-06-17 20:03 IST

ಕಲಬುರಗಿ: 2025ರ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಕೇಂದ್ರ ಸರಕಾರ ಕೂಡಲೇ ಹಿಂಪಡೆಯದಿದ್ದರೆ ದೇಶದಾದ್ಯಂತ ಉಗ್ರ ಹೋರಾಟಕ್ಕೆ ಇಳಿಯಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯ ರಾಜ್ಯ ಸಮಿತಿಯ ಸಂಚಾಲಕ ಸುಲೇಮಾನ್ ಖಾನ್ ಹೇಳಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 1995ರ ವಕ್ಫ್ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆ ತರಲಾರದೆ ಉದ್ದೇಶಪೂರ್ವಕವಾಗಿ ವಕ್ಫ್ ಆಸ್ತಿಯನ್ನು ಕಬಳಿಸಲು 2025ರ ತಿದ್ದುಪಡಿ ಕಾಯ್ದೆ ಜಾರಿಗೆ ಮಾಡಲಾಗುತ್ತದೆ ಎಂದು ದೂರಿದರು.

ತನ್ನ ಸಂಖ್ಯಾ ಬಲವನ್ನು ಬಳಸಿಕೊಂಡು, ಆಡಳಿತ ಪಕ್ಷವು ದೇಶದ ಲಕ್ಷಾಂತರ ಮುಸ್ಲಿಮರು, ಅಲ್ಪಸಂಖ್ಯಾತರು ಮತ್ತು ನ್ಯಾಯವನ್ನು ಪ್ರೀತಿಸುವ ನಾಗರಿಕರ ಇಚ್ಛೆಗೆ ವಿರುದ್ಧವಾಗಿ ವಕ್ಫ್ ಕಾಯ್ದೆಗೆ ಅನಿಯಂತ್ರಿತ, ತಾರತಮ್ಯದ ತಿದ್ದುಪಡಿಗಳನ್ನು ಅಂಗೀಕರಿಸಿದೆ. ಈ ತಿದ್ದುಪಡಿಗಳನ್ನು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ. ಯಾವುದೇ ಕಾರಣಕ್ಕೂ ಸ್ವಾಗತಿಸುವುದಿಲ್ಲ. ಇದು ಸಂವಿಧಾನದ ಕಲಂ 14, 15, 25, 26 ಮತ್ತು 29 ನೇ ವಿಧಿಗಳ ಅಡಿಯಲ್ಲಿ ಖಾತರಿಪಡಿಸಲಾದ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದರು.

ಜಿಲ್ಲಾ ಸಂಚಾಲಕ ಡಾ.ಅಸಗರ ಚುಲಬುಲ್ ಮಾತನಾಡಿದರು.

ಪತ್ರಿಕಾಗೋಷ್ಠಿಯನ್ನು ಝಾಕಿರ್‌ ಹುಸೇನ್‌, ಮೌಲಾನಾ ಫಕರುದ್ದೀನ್‌ ಮಾನೀಯಾಲ, ಮೌಲಾನಾ ಅಜಮತ ಫಾರೂಕಿ, ಮೌಲಾನಾ ಗೌಸೋದಿನ ಖಾಸಿಮಿ, ಮೌಲಾನಾ ಶಫೀಕ್‌ ಖಾಸಮೀ, ಜಬ್ಬಾರ್ ಗೋಲಾ, ರಿಝ್ವಾನ್‌ ಸಿದ್ದೀಕಿ, ಶಹನಾಜ್ ಅಖ್ತರ್, ರಯೀಸ್ ಫಾತೀಮಾ, ಸೇರಿದಂತೆ ಮತ್ತಿತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News