ಕಲಬುರಗಿ | ತಾಲ್ಲೂಕು ಪಂಚಾಯತ್ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ
Update: 2025-06-05 21:07 IST
ಕಲಬುರಗಿ : ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನಗರದ ತಾಲ್ಲೂಕು ಪಂಚಾಯತ್ ಆವರಣದಲ್ಲಿ ತಾಯಿಯ ಹೆಸರಲ್ಲಿ ಒಂದು ವೃಕ್ಷ ಸಸಿ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ತಾಲ್ಲೂಕು ಪಂಚಾಯತ್ ಕಾರ್ಯ ನಿರ್ವಹಣಾ ಅಧಿಕಾರಿ ಎಂ.ಡಿ.ಸೈಯದ್ ಪಟೇಲ್ ಅವರು ಸಸಿ ನೆಡುವುದರ ಮೂಲಕ ವನಮಹೊತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಿರ್ದೇಶಕ ರೇವಣಸಿದ್ದಪ್ಪ ಗೌಡರ, ಲೆಕ್ಕಾಧಿಕಾರಿ ಕವಿತಾ, ವ್ಯವಸ್ಥಾಪಕಿ ಬಸಮ್ಮ, ಸಿಬ್ಬಂದಿಗಳಾದ ಅನುಸೂಯ, ಶೋಭಾದೇವಿ, ಪದ್ಮವತಿ, ರಾಮಗುಂಡ, ಹಣಮಂತರಾಯ, ಅಶೋಕ, ಲಕ್ಷ್ಮೀಕಾಂತ ಕೆ.ಮಾನೆ ಮತ್ತು ಸಾಜಿಮೀಯ, ನರೇಗಾ ಐ.ಇ.ಸಿ ಮೋಸಿನ್ ಖಾನ್ ಇದ್ದರು.