×
Ad

ಕಲಬುರಗಿ | ವಿಶ್ವಬಾಯಿ ಆರೋಗ್ಯ ದಿನಾಚರಣೆ

Update: 2025-03-08 23:29 IST

ಕಲಬುರಗಿ : ನಾಗನಹಳ್ಳಿ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಷ್ಟ್ರೀಯ ಆರೋಗ್ಯ ಅಭಿಯಾನ, ರಾಷ್ಟ್ರೀಯ ಬಾಯಿ ಆರೋಗ್ಯ ಕಾರ್ಯಕ್ರಮ ಹಾಗೂ ಪೊಲೀಸ್ ತರಬೇತಿ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ʼವಿಶ್ವಬಾಯಿ ಆರೋಗ್ಯ ದಿನಾಚರಣೆʼ ಕಾರ್ಯಕ್ರಮವನ್ನು ಪೊಲೀಸ್ ಅಧೀಕ್ಷಕರು ಹಾಗೂ ಮಹಾವಿದ್ಯಾಲಯದ ಪ್ರಾಂಶುಪಾಲ ಡೆಕ್ಕಾ ಕಿಶೋರ ಬಾಬು ಉದ್ಘಾಟಿಸಿದರು.

ಬಳಿಕ ಮಾತನಾಡಿ, ಆರೋಗ್ಯಕರ ಬಾಯಿ ಆರೋಗ್ಯಕರ ಸಮಾಜಕ್ಕೆ ಕಾರಣವಾಗುತ್ತೆ ಎಂದು ತಿಳಿಸಿದರು.

ಜಿಲ್ಲಾ ರಾಷ್ಟೀಯ್ ಬಾಯಿ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ಸಂಧ್ಯಾ ಕಾನೇಕರ್ ಮಾತನಾಡಿ, ಮಾರ್ಚ್ ತಿಂಗಳಲ್ಲಿ ವಿಶ್ವ ಬಾಯಿ ಆರೋಗ್ಯ ದಿನಾಚರಣೆಯ ಮಾಡಲಾಗುತ್ತೆ. ರಾಷ್ಟೀಯ ಬಾಯಿ ಅರೋಗ್ಯ ಕಾರ್ಯಕ್ರಮ 2014-15 ರಲ್ಲಿ ಪ್ರಾರಂಭ ವಾಗಿದ್ದು ಬಾಯಿ ರೋಗಗಳಿಂದ ಆಗುವ ಸಾವು ಮತ್ತು ನೋವುಗಳನ್ನು ಕಡಿಮೆ ಮಾಡುವ ಉದ್ದೇಶವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಡಾ.ಅಂಬಾರಾಯ ರುದ್ರವಾಡಿ, ಡಾ.ಶರಣಬಸಪ್ಪ ಗಣಜಲಖೇಡ, ಡಾ.ಶರಣಬಸಪ್ಪ ಕ್ಯಾತನಾಳ, ಡಾ.ಸಿದ್ರಾಮಪ್ಪ ಪಾಟೀಲ, ಡಾ.ಜಯಶ್ರೀ ಮುದ್ದಾ, ಡಾ.ಸೈಯದ್ ಝಕಾಉಲ್ಲಾ, ಡಾ.ಸ್ವರೋಪ್ಪ, ಡಾ.ಸ್ವೇತಾ, ಡಾ.ಅಮೃತಾ, ಡಾ.ವಿವೇಕಾನಂದ ರೆಡ್ಡಿ ಸೇರಿದಂತೆ ಅರೋಗ್ಯ ಇಲಾಖೆಯ ದಂತ ಆರೋಗ್ಯ ಅಧಿಕಾರಿಗಳು, ಪೆÇಲೀಸ್ ತರಬೇತಿ ಕಾಲೇಜು ಅಧಿಕಾರಿಗಳು, ಪ್ರಶಿಕ್ಷಣಾರ್ಥಿ ಗಳು, ಹಾಗೂ ಸಿಬ್ಬಂದಿಯವರು ಹಾಜರಿದ್ದರು. ಡಾ. ಆರಾಧನಾ ರಾಠೋಡ್ ನಿರೂಪಿಸಿದರು. ಎಸ್ ನಿಜಿಲಿಂಗಪ್ಪ ಹಾಗೂ ಅಲ್ ಬದರ್ ದಂತ ಮಹಾವಿದ್ಯಾಲಯ ವಿದ್ಯಾರ್ಥಿಗಳ ಕಿರು ನಾಟಕ್ ಪ್ರಸ್ತುತ ಪಡಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News