×
Ad

ಕಾರ್ಮಿಕ ಹೋರಾಟಗಾರ ಡಾ. ಮಲ್ಲೇಶಿ ಸಜ್ಜನ್ ನಿಧನ

Update: 2024-11-07 08:40 IST

ಕಲಬುರಗಿ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಹಾಗೂ ಜೆ. ಪಿ. ಕಾರ್ಖಾನೆಯ ಕಾರ್ಮಿಕ ಮುಖಂಡ, ಹೋರಾಟಗಾರ ಡಾ. ಮಲ್ಲೇಶಿ ಸಜ್ಜನ್ (73) ರವರು ಬುಧವಾರ ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ.

ಹೋರಾಟಗಾರ ಮಲ್ಲೇಶಿ ಸಜ್ಜನ್ ಅವರ ನಿಧನಕ್ಕೆ ಕದಸಂಸ ರಾಜ್ಯ ಸಂಚಾಲಕರಾದ ಡಿ.ಜಿ ಸಾಗರ, ಹೆಣ್ಣೂರು ಶ್ರೀನಿವಾಸ, ರಾಜ್ಯ ಸಂ. ಸಂಚಾಲಕ ಮರಿಯಪ್ಪ ಹಳ್ಳಿ, ಜೆ. ಪಿ ಕಾರ್ಮಿಕ ಸಂಘದ ಅಧ್ಯಕ್ಷ ಮಹ್ಮದ ಉಬೇದುಲ್ಲಾ, ಡಿ. ಡಿ ಓಣಿ, ಪೌರಾಯುಕ್ತ ಡಾ. ಗುರುಲಿಂಗಪ್ಪ, ಕದಸಂಸ ಜಿಲ್ಲಾ ಸಂಚಾಲಕ ಸುರೇಶ ಮೆಂಗನ, ಬಿಜೆಪಿ ಅಧ್ಯಕ್ಷ ನಿಂಗಪ್ಪ ಹುಳಗೋಳ, ಕಾಂಗ್ರೆಸ್ ಪಕ್ಷದ ಎಸ್ಸಿ ಘಟಕದ ಅಧ್ಯಕ್ಷ ರಾಜೇಶ ಯನಗುಂಟಿಕರ, ಶರಣು ಪಗಲಾಪೂರ, ಡಾ. ಅಹ್ಮದ ಪಟೇಲ ಸೇರಿದಂತೆ ಅನೇಕರು ಸಂತಾಪ ವ್ಯಕ್ತಪಡಿಸಿದ್ದಾರೆ.

ಮೃತರು ಪತ್ನಿ, ಇಬ್ಬರು ಪುತ್ರರು, ಮೂವರು ಸುಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ. 

 ಅಂತ್ಯಕ್ರಿಯೆಯು ಗುರುವಾರ ನಗರದ ಮಡ್ಡಿ ನಂ 1 ರ ಹಳ್ಳದ ಹತ್ತಿರವಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News