ಕಲಬುರಗಿ: ಅಪ್ರಾಪ್ತ ವಯಸ್ಸಿನ ಬಾಲಕಿ ಸಹಿತ ಪ್ರೇಮಿಗಳು ಆತ್ಮಹತ್ಯೆ
Update: 2023-12-13 15:42 IST
ಆಕಾಶ್
ಕಲಬುರಗಿ, ಡಿ.13: ಅಪ್ರಾಪ್ತ ವಯಸ್ಸಿನ ಬಾಲಕಿ ಸೇರಿದಂತೆ ಪ್ರೇಮಿಗಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಿತ್ತಾಪುರ ತಾಲೂಕಿನ ಚೌಕಿ ತಾಂಡ ಬಳಿ ನಡೆದಿರುವುದು ವರದಿಯಾಗಿದೆ.
ಆಕಾಶ್(18) ಹಾಗೂ ರಾಧಿಕಾ(15) ಆತ್ಮಹತ್ಯೆ ಮಾಡಿಕೊಂಡವರು.
ಚಿತ್ತಾಪುರ ಕೊಲ್ಲುರು ಗ್ರಾಮದ ನಿವಾಸಿಯಾಗಿದ್ದ ಆಕಾಶ್ ಮತ್ತು ರಾಂಪೂರಹಳ್ಳಿ ನಿವಾಸಿಯಾಗಿದ್ದ ರಾಧಿಕಾ ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದರೆನ್ನಲಾಗಿದೆ. ನಿನ್ನೆ ತಡರಾತ್ರಿ ಇವರಿಬ್ಬರು ವಿಷ ಸೇವಿಸಿದ್ದು, ಬಳಿಕ ಆಕಾಶ್ ತನ್ನ ತಾಯಿ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಕೂಡಲೇ ಅವರಿಬ್ಬರನ್ನು ಪತ್ತೆ ಹಚ್ಚಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ದಾರಿಮಧ್ಯೆ ಇಬ್ಬರೂ ಕೊನೆಯುಸಿರೆಳೆದರೆನ್ನಲಾಗಿದೆ.
ಈ ಬಗ್ಗೆ ವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.