×
Ad

ಕಾರ್ಮಿಕ ಇಲಾಖೆಯಿಂದ ಕಳಪೆ ಕಿಟ್ ವಿತರಣೆ: ಸುರೇಶ ನಾಡಿಗೇರ ಆರೋಪ

Update: 2025-11-04 08:48 IST

ಕಲಬುರಗಿ: ಕಟ್ಟಡ ಕಾರ್ಮಿಕರು ಈ ದೇಶದ ಬೆನ್ನೆಲುಬು ಕಾರ್ಮಿಕರು ದೇಶದ ಆರ್ಧಿಕತೆ ಹೆಚ್ಚಿಸುವ ಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ, ದೇಶದ ಅಭಿವೃದ್ಧಿ ಗೆ ಗಣನೀಯ ಕೊಡುಗೆ ನೀಡುತ್ತಿದ್ದಾರೆ, ಆದರೆ ಕಾರ್ಮಿಕರಿಗೆ ಮಂಡಳಿಯಿಂದ ಬರುವ ಅನೇಕ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಕಟ್ಟಡ ನಿರ್ಮಾಣ ಮತ್ತು ಕಾಮಗಾರಿ ಮಜ್ದೂರ್ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಎಸ್ ನಾಡಿಗೇರ ಆರೋಪಿಸಿದ್ದಾರೆ.

ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಮಿಕ ಇಲಾಖೆ ಆನಲೈನ್ ತಂತ್ರಾಂಶ ಸರಿಪಡಿಸಬೇಕು, ಫಲಾನುಭವಿಗಳ ಮಕ್ಕಳ ಶೈಕ್ಷಣಿಕ ಸಹಾಯಧನ, ಫಲಾನುಭವಿ ಹಾಗೂ ಕುಟುಂಬ ಸದಸ್ಯರ ವೈದ್ಯಕೀಯ ಧನ ಸಹಾಯ, ಅಂತ್ಯಕ್ರಿಯೆ ವೆಚ್ಚ, ಹೆರಿಗೆ ಸೌಲಭ್ಯ, ನಿವೃತ್ತಿ ಪಿಂಚಣಿ, ಕುಟುಂಬ ಪಿಂಚಣಿ, ಮದುವೆ ಸಹಾಯಧನಗಳನ್ನು ಸರಿಯಾಗಿ ನೀಡಬೇಕು ಎಂದು ಆಗ್ರಹಿಸಿದರು.

ಇಲಾಖೆಯಿಂದ ಕಳಪೆಗುಣಮಟ್ಟದ ಕಿಟ್ ಗಳನ್ನ ಕೊಡಲಾಗುತ್ತಿದೆ. ಕಳಪೆಯಾಗಿರುವ ಕಾರಣ ಆ ಕಿಟ್ ಗಳು ನಮಗೆ ಉಪಯುಕ್ತವಾಗುತ್ತಿಲ್ಲ. ಕೂಡಲೇ ಅವುಗಳ ಗುಣಮಟ್ಟ ಹೆಚ್ಚಿಸಬೇಕೆಂದು ಒತ್ತಾಯಿಸಿದರು.

ಈ ಸುದ್ದಿಗೋಷ್ಠಿಯಲ್ಲಿ ಗೀತಾ ಕುಲಕರ್ಣಿ, ಚಂದ್ರಕಲಾ, ಶ್ರೀಕಾಂತ್, ವೀರಭದ್ರಪ್ಪಾ, ಶಿವಯ್ಯಾ ಸೇರಿದಂತೆ ಅನೇಕರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News