×
Ad

ಆ.5 ರಿಂದ ವಿಜ್ಞಾನ, ತಂತ್ರಜ್ಞಾನ ಅಕಾಡೆಮಿ ಕಚೇರಿಯಲ್ಲಿ ಕಾರ್ಯಾಗಾರ: ಹೆಸರು ನೋಂದಣಿಗೆ ಸೂಚನೆ

Update: 2025-07-22 17:22 IST

ಕಲಬುರಗಿ : ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ವತಿಯಿಂದ “Science Communication: Strategies for Reaching Diverse Audiences” ಕುರಿತು 2025ರ ಆ.5 ರಿಂದ 7 ರವರೆಗೆ ಮೂರು ದಿನಗಳ ಸರ್ಟಿಫಿಕೇಟ್ ಕೋರ್ಸ್ ಕಾರ್ಯಾಗಾರವನ್ನು ಬೆಂಗಳೂರಿನ ಅಕಾಡೆಮಿಯ ಕಚೇರಿಯಲ್ಲಿ ಆಯೋಜಿಸಲಾಗಿದೆ ಎಂದು ಅಕಾಡೆಮಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕಾರ್ಯಾಗಾರದಲ್ಲಿ ವಿವಿಧ ಪ್ರತಿಷ್ಠಿತ ಸಂಸ್ಥೆಗಳ ಹೆಸರಾಂತ ವಿಜ್ಞಾನಿಗಳು ತಾಂತ್ರಿಕ ಉಪನ್ಯಾಸವನ್ನು ನೀಡಲಿದ್ದು, ಸ್ನಾತಕೋತ್ತರ ವಿಜ್ಞಾನ ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶೈಕ್ಷಣಿಕ ತಜ್ಞರು, ಭಾಗವಹಿಸಬಹುದಾಗಿದೆ. ಆಸಕ್ತಿಯುಳ್ಳ ಪ್ರತಿನಿಧಿಗಳು ಗೂಗಲ್ ಫಾರಂ https://forms.gle/iyPn85smZ81RGGnf6 ಮೂಲಕ 2025ರ ಆ.2 ರೊಳಗಾಗಿ ಮೂಲಕ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಕಾರ್ಯಾಗಾರದ ಸಂಯೋಜಕ ಶ್ರೀನಿವಾಸು ವಿ. ಕೆ. ಇವರ ಮೊಬೈಲ್ 9620767819ಗೆ ಸಂಪರ್ಕಿಸಲು ಅಥವಾ ಅಕಾಡೆಮಿಯ https://kstacademy.in ವೀಕ್ಷಿಸಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News