×
Ad

ನಾಪತ್ತೆಯಾಗಿದ್ದ ಬಿಜೆಪಿ ಶಾಸಕನ ಪತ್ನಿ ಪತ್ತೆ

Update: 2023-11-01 23:43 IST

ಲಕ್ನೊ: ಮಂಗಳವಾರ ಘಾಝಿಪುರ್ ನ ತಮ್ಮ ನಿವಾಸದಿಂದ ನಾಪತ್ತೆಯಾಗಿದ್ದ ಉತ್ತರ ಪ್ರದೇಶ ಬಿಜೆಪಿ ಶಾಸಕ ಸೀತಾರಾಮ್ ವರ್ಮರ ಪತ್ನಿ ಪುಷ್ಪಾ ವರ್ಮ ಅವರು ಬುಧವಾರ ಬಾರಾಬಂಕಿಯ ಸಫೇದಾಬಾದ್ ನಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ ಎಂದು TOI ಸುದ್ದಿ ಸಂಸ್ಥೆ ವರದಿ ಮಾಡಿದೆ.

“ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಲಾಗಿದೆ” ಎಂದು ಅವರು ಹೇಳಿದ್ದಾರೆ.

ಶಾಸಕರ ಪುತ್ರ ಹಾಗೂ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಪಂಕಜ್ ಕುಮಾರ್ ಅವರು ಈ ಸಂಬಂಧ ಘಾಝಿಪುರ್ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು.

ನಾಪತ್ತೆಯಾಗಿದ್ದ ಮಹಿಳೆಯನ್ನು ಪತ್ತೆ ಹಚ್ಚಲು 10 ಮಂದಿ ಪೊಲೀಸರ ತಂಡವನ್ನು ರಚಿಸಲಾಗಿತ್ತು.

ಈ ಕುರಿತು ಪ್ರತಿಕ್ರಿಯಿಸಿರುವ ಉತ್ತರ ವಲಯದ ಉಪ ಪೊಲೀಸ್ ಆಯುಕ್ತ ಕಾಸಿಮ್ ಅಬಿದಿ, “ಪುಷ್ಪಾ ಅವರು ಮರೆವಿನ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರು ವಿಷಯಗಳನ್ನು ಮರೆತು ಹೋಗುತ್ತಾರೆ” ಎಂದು ತಿಳಿಸಿದ್ದಾರೆ.

65 ವರ್ಷದ ಪುಷ್ಪಾ ವರ್ಮ ಅವರನ್ನು ಪತ್ತೆ ಹಚ್ಚಲು ಅವರಿದ್ದ ಕೊನೆಯ ಸ್ಥಳದಲ್ಲಿನ ಎಲ್ಲ ಸಿಸಿಟಿವಿಗಳನ್ನು ಪರಿಶೀಲಿಸಲಾಗಿತ್ತು. ಇದರೊಂದಿಗೆ ಆಸ್ಪತ್ರೆಗಳು ಹಾಗೂ ಉದ್ಯಾನವನಗಳು ಸೇರಿದಂತೆ ಸಮೀಪದ ಪ್ರದೇಶಗಳಲ್ಲಿ ಆಕೆಯ ಭಾವಚಿತ್ರವನ್ನು ಹಂಚಲಾಗಿತ್ತು. ಅಲ್ಲದೆ ರೈಲ್ವೆ ನಿಲ್ದಾಣಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ಭಿತ್ತಿ ಚಿತ್ರಗಳನ್ನು ಅಂಟಿಸಲಾಗಿತ್ತು ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News