×
Ad

ಉತ್ತರ ಪ್ರದೇಶ | ರೀಲ್ಸ್ ಮಾಡುತ್ತಿದ್ದ ಆರು ಮಂದಿ ಬಾಲಕಿಯರು ಯಮುನಾ ನದಿಯಲ್ಲಿ ಮುಳುಗಿ ಮೃತ್ಯು

Update: 2025-06-04 20:30 IST

PC : NDTV 

ಆಗ್ರಾ: ಬೇಸಿಗೆಯ ವಿಪರೀತ ಝಳವನ್ನು ತಪ್ಪಿಸಿಕೊಳ್ಳಲು ಯಮುನಾ ನದಿಯಲ್ಲಿ ಸ್ನಾನ ಮಾಡುತ್ತಾ, ಅದರ ರೀಲ್ಸ್ ಮಾಡುತ್ತಿದ್ದ ಆರು ಮಂದಿ ಬಾಲಕಿಯರು ನದಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ದುರಂತ ಘಟನೆ ಮಂಗಳವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಘಟನೆಯು ಸಿಕಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಇಡೀ ಗ್ರಾಮ ಶೋಕತಪ್ತವಾಗಿದೆ.

ನದಿ ಬದಿಯ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ಈ ಬಾಲಕಿಯರು, ತಮ್ಮ ಕೆಲಸ ಮುಗಿದ ನಂತರ, ಬಿಸಿಲಿನ ಝಳದಿಂದ ತಮ್ಮನ್ನು ತಂಪು ಮಾಡಿಕೊಳ್ಳಲೆಂದು ನದಿಗೆ ಇಳಿದಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ನದಿಯ ಸುಳಿಯಲ್ಲಿ ಕೊಚ್ಚಿಕೊಂಡು ಹೋಗುವುದಕ್ಕೂ ಮುನ್ನ, ಅವರು ನದಿ ದಂಡೆಯ ಬಳಿ ಆಟವಾಡುತ್ತಾ, ವಿಡಿಯೊ ಚಿತ್ರೀಕರಣ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಪ್ರಾಥಮಿಕ ವರದಿಗಳ ಪ್ರಕಾರ, ನಾಲ್ವರು ಬಾಲಕಿಯರು ನದಿಯಲ್ಲಿ ಮುಳುಗಿ ಹೋಗಿದ್ದು, ಉಳಿದಿಬ್ಬರನ್ನು ರಕ್ಷಿಸಲಾಯಿತು ಎನ್ನಲಾಗಿದೆ. ಗಂಭೀರ ಸ್ಥಿತಿಯಲ್ಲಿದ್ದ ಅವರಿಬ್ಬರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಅವರಿಬ್ಬರೂ ಮೃತಪಟ್ಟಿದ್ದಾರೆ. ಇದರಿಂದಾಗಿ, ನದಿ ನೀರಿನಲ್ಲಿ ಮುಳುಗಿ ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.

ಈ ಎಲ್ಲ ಆರು ಬಾಲಕಿಯರೂ ಒಂದೇ ಅವಿಭಕ್ತ ಕುಟುಂಬದ ಸದಸ್ಯರಾಗಿದ್ದು, ಅವರೆಲ್ಲ ಸಮೀಪದ ಗ್ರಾಮವೊಂದರ ನಿವಾಸಿಗಳಾಗಿದ್ದರು ಎಂದು ಹೇಳಲಾಗಿದೆ. ಸಂತ್ರಸ್ತರ ಕುಟುಂಬದ ಸದಸ್ಯರಿಗೆ ಅಗತ್ಯ ನೆರವು ಒದಗಿಸಲಾಗುವುದು ಹಾಗೂ ಈ ಕುರಿತು ತನಿಖೆ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಭರವಸೆ ನೀಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News