×
Ad

ರಾಹುಲ್ ನಿವಾಸದಲ್ಲಿ ಔತಣಕೂಟ; ಒಗ್ಗಟ್ಟು ಪ್ರದರ್ಶಿಸಿದ ಇಂಡಿಯಾ ಮೈತ್ರಿಕೂಟ ನಾಯಕರು

Update: 2025-08-08 07:55 IST

PC: x.com/INCIndia

ಹೊಸದಿಲ್ಲಿ: ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತಮ್ಮ ಹೊಸ ಅಧಿಕೃತ ನಿವಾಸದಲ್ಲಿ ಗುರುವಾರ ರಾತ್ರಿ ಏರ್ಪಡಿಸಿದ್ದ ಔತಣಕೂಟದಲ್ಲಿ ಇಂಡಿಯಾ ಮೈತ್ರಿಕೂಟದ ಹಲವು ಮುಖಂಡರು ಭಾಗವಹಿಸಿದ್ದರು. ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ವಿರೋಧಿಸಿ ಸಂಸತ್ ಕಲಾಪವನ್ನು ತಡೆದ ಸಂದರ್ಭದಲ್ಲಿ ಪ್ರದರ್ಶಿಸಿದ ಸಮನ್ವಯ ಮತ್ತು ಮೈತ್ರಿಕೂಟದ ಘಟಕ ಪಕ್ಷಗಳ ಏಕತೆಯನ್ನು ಮರು ಬಿಂಬಿಸುವ ಉದ್ದೇಶದಿಂದ ಈ ಕೂಟ ಆಯೋಜನೆಯಾಗಿತ್ತು.

ಈ ಭೋಜನಕೂಟದಲ್ಲಿ ಇಂಡಿಯಾ ಮೈತ್ರಿಕೂಟದ ಮುಖಂಡರಾದ ಸೋನಿಯಾಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಶರದ್ ಪವಾರ್, ಫಾರೂಕ್ ಅಬ್ದುಲ್ಲಾ, ಉದ್ಧವ್ ಠಾಕ್ರೆ ಮತ್ತು ಆದಿತ್ಯ ಠಾಕ್ರೆ, ತೇಜಸ್ವಿ ಯಾದವ್, ಅಭಿಷೇಕ್ ಬ್ಯಾನರ್ಜಿ, ಟಿ.ಆರ್.ಬಾಲು, ದೀಪಂಕರ್ ಭಟ್ಟಾಚಾರ್ಯ, ಮಹೂವಾ ಮಾಝಿ, ಎಂ.ಎ.ಬೇಬಿ (ಸಿಪಿಎಂ), ಮೆಹಬೂಬಾ ಮುಫ್ತಿ ಭಾಗವಹಿಸಿದ್ದರು.

ಕೆ.ಸಿ.ವೇಣುಗೋಪಾಲ್, ಸಿಪಿಐನ ಡಿ.ರಾಜಾ, ಆರ್‌ಎಸ್‌ಪಿಯ ಪ್ರೇಮಚಂದ್ರನ್, ಐಯುಎಂಎಲ್ ನ ಸಾದಿಕ್ ಅಲಿ ಶಬೀಬ್ ತಂಙಳ್, ಮುಕೇಶ್ ಸಹಾನಿ (ವಿಐಪಿ), ಕಮಲ್ ಹಾಸನ್, ಜೋಸ್ ಮಣಿ, ಪಿ.ಕೆ.ಕುಂಞಾಲಿ ಕುಟ್ಟಿ, ಸಂಜಯ ರಾವತ್, ಡೆರೆಕ್ ಒಬ್ರಿಯಾನ್, ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ರೇವಂತ್ ರೆಡ್ಡಿ, ಮುಖಂಡರಾದ ಸುಖ್ವೀಂದರ್ ಸುಖು, ತಿರುಚಿ ಸಿವಾ, ರಾಮಗೋಪಾಲ ಯಾದವ್, ಸುಪ್ರಿಯಾ ಸುಳೆ, ಕಣಿಮೋಳಿ, ಡಿಂಪಲ್ ಯಾದವ್ ಮತ್ತಿತರರು ಪಾಲ್ಗೊಂಡಿದ್ದರು.

ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ದೋಷಗಳ ಬಗ್ಗೆ ಭೋಜನ ಕೂಟಕ್ಕೆ ಮುನ್ನ ರಾಹುಲ್ ಗಾಂಧಿ‌ ಪ್ರಸ್ತುತಿ ಪ್ರದರ್ಶಿಸಿದರು. ಆರ್‌ಜೆಡಿ ಮುಖಂಡ ತೇಜಸ್ವಿ ಅವರು ಬಿಹಾರ ಎಸ್ಐಆರ್ ಬಗ್ಗೆ ಪ್ರಸ್ತಾವಿಸಿ, ರಾಜ್ಯವ್ಯಾಪಿ ಪ್ರತಿಭಟನೆಯನ್ನು ಸಂಘಟಿತವಾಗಿ ನಡೆಸಲಾಗುವುದು ಎಂದು ಪ್ರಕಟಿಸಿದರು. ಸಂಸತ್ತಿನಲ್ಲಿ ಈ ವಿಚಾರದಲ್ಲಿ ಆರ್‌ಜೆಡಿಗೆ ಬೆಂಬಲವಾಗಿ ನಿಂತ ಎಲ್ಲ ಪಕ್ಷಗಳ ಮುಖಂಡರಿಗೆ ಕೃತಜ್ಞತೆ ಸಲ್ಲಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News