2026ರ ತಮಿಳುನಾಡು ವಿಧಾನಸಭಾ ಚುನಾವಣೆ : ನಟ ವಿಜಯ್ ಟಿವಿಕೆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ
ಚೆನ್ನೈ: 2026ರಲ್ಲಿ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅನ್ನು ತಮಿಳಗ ವೆಟ್ರಿ ಕಳಗಂ(ಟಿವಿಕೆ) ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಶುಕ್ರವಾರ ಅಧಿಕೃತವಾಗಿ ಪ್ರಕಟಿಸಲಾಗಿದೆ.
ಪಕ್ಷದ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ವಿಜಯ್, ಸಾರ್ವಜನಿಕವಾಗಿ ಅಥವಾ ಹಿಂಬಾಗಿಲ ಮೂಲಕವಾಗಲಿ ಬಿಜೆಪಿಯೊಂದಿಗೆ ಯಾವುದೇ ಮೈತ್ರಿಯನ್ನು ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಟಿವಿಕೆ ಪಕ್ಷ ಮತ್ತು ಬಿಜೆಪಿ ಮೈತ್ರಿ ಕುರಿತ ವದಂತಿಗಳಿಗೂ ತೆರೆ ಎಳೆದಿದ್ದಾರೆ.
ʼನಮ್ಮ ಸೈದ್ಧಾಂತಿಕ ವಿರೋಧಿಯಾದ ಬಿಜೆಪಿಯೊಂದಿಗೆ ಕೈಜೋಡಿಸುವುದಿಲ್ಲ ಎಂದ ವಿಜಯ್, ಬಿಜೆಪಿ ಬೇರೆಲ್ಲಾದರೂ ವಿಷ ಬೀಜ ಬಿತ್ತಬಹುದು ಹೊರತು, ತಮಿಳುನಾಡಿನಲ್ಲಲ್ಲ. ನೀವು ಅಣ್ಣಾ ಮತ್ತು ಪೆರಿಯಾರ್ ಅವರನ್ನು ವಿರೋಧಿಸಿ ತಮಿಳುನಾಡಿನಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಬಿಜೆಪಿಯೊಂದಿಗೆ ಕೈಜೋಡಿಸಲು ಟಿವಿಕೆ ಡಿಎಂಕೆಯೂ ಅಲ್ಲ; ಎಐಎಡಿಎಂಕೆಯೂ ಅಲ್ಲ” ಎಂದು ವಿಜಯ್ ಹೇಳಿದ್ದಾರೆ.
ಇದೇ ವೇಳೆ, ಟಿವಿಕೆ ಪಕ್ಷವು ಡಿಎಂಕೆ ಹಾಗೂ ಬಿಜೆಪಿ ಎರಡೂ ಪಕ್ಷವನ್ನು ವಿರೋಧಿಸಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.