×
Ad

ಬಿಹಾರ ಚುನಾವಣೆ | ಬಿಜೆಪಿ ಏಜೆಂಟರಿಂದ ಪಕ್ಷದ ಚಿಹ್ನೆ, ನಾಯಕರ ಫೊಟೋಗಳಿರುವ ಚೀಟಿ ಹಂಚಿಕೆ : ಆರ್ ಜೆ ಡಿ ಆರೋಪ

ಎಫ್ ಐ ಆರ್ ದಾಖಲು, ಇಬ್ಬರ ಬಂಧನ

Update: 2025-11-11 18:41 IST

Photo: scroll.in

ಪಾಟ್ನಾ: ಬಿಹಾರದ ಮೋತಿಹಾರಿ ವಿಧಾನಸಭಾ ಕ್ಷೇತ್ರದ ಮತಗಟ್ಟೆಗಳಲ್ಲಿ ಬಿಜೆಪಿಯ ಚುನಾವಣಾ ಏಜೆಂಟ್ ಗಳು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎನ್ಡಿಎ ನಾಯಕರ ಭಾವಚಿತ್ರಗಳಿರುವ ಚೀಟಿಗಳು ಹಾಗೂ ತಮ್ಮ ಪಕ್ಷದ ಚಿಹ್ನೆಗಳನ್ನು ಹಂಚುತ್ತಿದ್ದಾರೆ ಎಂದು ಮಂಗಳವಾರ ರಾಷ್ಟ್ರೀಯ ಜನತಾ ದಳ ಆರೋಪಿಸಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಎರಡನೆ ಹಾಗೂ ಅಂತಿಮ ಹಂತದ ಮತದಾನದಲ್ಲಿ 122 ವಿಧಾನಸಭಾ ಕ್ಷೇತ್ರಗಳಲ್ಲಿ ಮತ ಚಲಾವಣೆ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಇಂತಹ ಘಟನೆಗಳು ಮತಗಟ್ಟೆ ಸಂಖ್ಯೆ 229 ಹಾಗೂ 230ರಲ್ಲಿ ನಡೆಯುತ್ತಿದ್ದು, ಇಂತಹುದೇ ಘಟನೆಗಳು ಮೋತಿಹಾರಿ ವಿಧಾನಸಭಾ ಕ್ಷೇತ್ರದ ಇನ್ನಿತರ ಮತಗಟ್ಟೆಗಳಲ್ಲೂ ನಡೆಯುತ್ತಿವೆ ಎಂಬ ದೂರುಗಳು ಬರುತ್ತಿವೆ ಎಂದು ವಿರೋಧ ಪಕ್ಷವಾದ ರಾಷ್ಟ್ರೀಯ ಜನತಾ ದಳ ದೂರಿದೆ.

ಈ ಕುರಿತು ಪ್ರತಿಕ್ರಿಯಿಸಿದ ಚುನಾವಣಾ ಆಯೋಗ, ಈ ಸಂಬಂಧ ಎಫ್ಐಆರ್ ದಾಖಲಿಸಿಕೊಳ್ಳಲಾಗಿದ್ದು, ಈವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದೆ.

ಬಿಹಾರ ವಿಧಾನಸಭಾ ಚುನಾವಣೆಯ ಎರಡನೆ ಹಂತದ ಮತದಾನ ಪ್ರಾರಂಭಗೊಳ್ಳುವುದಕ್ಕೂ ಮುನ್ನ, ನಾವು ಮತಗಳ್ಳತನ ಅಥವಾ ಅಪ್ರಾಮಾಣಿಕತೆಗೆ ಅವಕಾಶ ನೀಡುವುದಿಲ್ಲ ಎಂದು ರಾಷ್ಟ್ರೀಯ ಜನತಾ ದಳದ ನಾಯಕ ಹಾಗೂ ವಿಧಾನಸಭಾ ವಿಪಕ್ಷ ನಾಯಕ ತೇಜಸ್ವಿ ಯಾದವ್ ಘೋಷಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News