×
Ad

ಬಿಜೆಪಿ ಸೇರುವಂತೆ ನನ್ನ ಮೇಲೆ ಒತ್ತಡ ಹೇರಲಾಗುತ್ತಿದೆ, ಆದರೆ ನಾನು ಯಾವತ್ತೂ ತಲೆ ಬಾಗುವುದಿಲ್ಲ: ಅರವಿಂದ್‌ ಕೇಜ್ರಿವಾಲ್‌

Update: 2024-02-05 11:30 IST

ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ (PTI)

ಹೊಸದಿಲ್ಲಿ: ಬಿಜೆಪಿ ಸೇರುವಂತೆ ತನ್ನ ಮೇಲೆ ಹಾಗೂ ಇತರ ಆಮ್‌ ಆದ್ಮಿ ಪಕ್ಷ ಮುಖಂಡರ ಮೇಲೆ ಬಿಜೆಪಿ ಒತ್ತಡ ಹೇರುತ್ತಿದೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಆರೋಪಿಸಿದ್ದಾರೆ.

“ಅವರೇನೇ ಸಂಚನ್ನು ನಮ್ಮ ವಿರುದ್ಧ ಹೂಡಲಿ, ಏನೂ ಕೈಗೂಡದು. ಅವರ ವಿರುದ್ಧ ದೃಢವಾಗಿ ನಿಂತಿದ್ದೇನೆ ಹಾಗೂ ತಲೆ ಬಾಗುವ ಪ್ರಶ್ನೆಯೇ ಇಲ್ಲ. “ಬನ್ನಿ, ಬಿಜೆಪಿ ಸೇರಿ, ನಿಮ್ಮ ತಂಟೆಗೆ ಬರುವುದಿಲ್ಲ” ಎಂದು ಅವರು ಹೇಳುತ್ತಾರೆ. ಆದರೆ ನಾನು ಯಾವತ್ತೂ ಬಿಜೆಪಿ ಸೇರುವುದಿಲ್ಲ. ನಾನೇಕೆ ಬಿಜೆಪಿ ಸೇರಬೇಕು? ಯಾರಾದರೂ ಬಿಜೆಪಿ ಸೇರಿದರೆ ಎಲ್ಲಾ ತಪ್ಪುಗಳನ್ನೂ ಮನ್ನಿಸಲಾಗುತ್ತದೆ,” ಎಂದು ದಿಲ್ಲಿಯ ಕಿರಾರಿ ಪ್ರದೇಶದಲ್ಲಿ ಎರಡು ಶಾಲಾ ಕಟ್ಟಡಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಾ ಅವರು ಹೇಳಿದರು.

ಆಪ್‌ ಒಳ್ಳೆಯ ಶಾಲೆಗಳು ಮತ್ತು ಆಸ್ಪತ್ರೆಗಳನ್ನು ನಿರ್ಮಿಸುತ್ತಿರುವುದರಿಂದ ಕೇಂದ್ರೀಯ ತನಿಖಾ ಏಜನ್ಸಿಗಳ ಮೂಲಕ ಆಪ್‌ ನಾಯಕರನ್ನು ಬಿಜೆಪಿ ಗುರಿ ಮಾಡುತ್ತಿದೆ ಎಂದು ಕೇಜ್ರಿವಾಲ್‌ ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News