×
Ad

ಬಜರಂಗದಳ ನಾಯಕ ಮೋನು ಮನೇಸರ್ ಬಂಧನಕ್ಕೆ ರೈತರು, ಖಾಪ್ ಗಳ ಒತ್ತಾಯ; ಶಾಂತಿಗಾಗಿ ಅಭಿಯಾನ

ಹರ್ಯಾಣದ ಸುಮಾರು 30 ಖಾಪ್ ಗಳು, ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು, ವಿವಿಧ ರೈತ ಸಂಘಗಳು ಮತ್ತು ವಿವಿಧ ಧರ್ಮಗಳ ಜನರು ಬುಧವಾರ ಹಿಸಾರ್ ಜಿಲ್ಲೆಯ ನಾರ್ನಾಂಡ್ ಪಟ್ಟಣದ ಬಾಸ್ ಗ್ರಾಮದಲ್ಲಿ ಮಹಾಪಂಚಾಯತ್ ನಡೆಸಿ ನುಹ್ ಕೋಮುಗಲಭೆಗೆ ಸಂಬಂಧಿಸಿದಂತೆ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದರು. ಭಾರತೀಯ ಕಿಸಾನ್ ಮಜ್ದೂರ್ ಯೂನಿಯನ್ ಆಯೋಜಿಸಿದ್ದ ಮಹಾಪಂಚಾಯತ್ ನಲ್ಲಿ ಹಿಂದೂಗಳು, ಮುಸ್ಲಿಮರು ಹಾಗೂ ಸಿಖ್ಖರು ಭಾಗವಹಿಸಿದ್ದರು. ಎಲ್ಲ ಧರ್ಮದ ಜನರು ಶಾಂತಿ ಸ್ಥಾಪನೆಗೆ ಶ್ರಮಿಸಬೇಕು ಎಂದು ಸಭೆ ನಿರ್ಣಯಿಸಿತು

Update: 2023-08-11 10:11 IST

Farmers' Mahapanchayat (photo courtesy @newsclickin/Twitter)

ಹೊಸದಿಲ್ಲಿ: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೋಮು ಘರ್ಷಣೆಯ ಹಿನ್ನೆಲೆಯಲ್ಲಿ ಹಲವಾರು ರೈತ ಸಂಘಗಳು ಹಾಗೂ ಖಾಪ್ ಪಂಚಾಯತ್ ಗಳು ಶಾಂತಿಗಾಗಿ ಮನವಿ ಮಾಡಿದ್ದು ಬಜರಂಗದಳ ನಾಯಕ ಮೋನು ಮಾನೇಸರ್ ನನ್ನು ಬಂಧಿಸುವಂತೆ ಒತ್ತಾಯಿಸಿವೆ.

ಜುಲೈ 31 ರಂದು ವಿಶ್ವ ಹಿಂದೂ ಪರಿಷತ್ (ವಿಎಚ್ ಪಿ) ಮೆರವಣಿಗೆಯ ಮೇಲೆ ಗುಂಪು ದಾಳಿ ಮಾಡಿದಾಗ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ನುಹ್ ನಲ್ಲಿ ನಡೆದ ಘರ್ಷಣೆಯಲ್ಲಿ ಆರು ಜನರು ಸಾವನ್ನಪ್ಪಿದ್ದರು. ಮೃತರಲ್ಲಿ ಇಬ್ಬರು ಗೃಹರಕ್ಷಕರು ಹಾಗೂ ಓರ್ವ ಧರ್ಮಗುರು ಸೇರಿದ್ದಾರೆ.

ಬಜರಂಗದಳದ ನಾಯಕ, ಮಾನೇಸರ್ ಈ ವರ್ಷದ ಆರಂಭದಲ್ಲಿ ಇಬ್ಬರು ಮುಸ್ಲಿಂ ಪುರುಷರ ಹತ್ಯೆ ಪ್ರಕ್ರರಣದಲ್ಲಿ ಪೊಲೀಸರಿಗ ಬೇಕಾಗಿದ್ದಾನೆ.. ಮಾನೇಸರ್ ನುಹ್ ನಲ್ಲಿನ ಧಾರ್ಮಿಕ ಮೆರವಣಿಗೆಯಲ್ಲಿ ಪಾಲ್ಗೊಳ್ಳುತ್ತಾನೆ ಎಂಬ ವದಂತಿಗಳು ನಗರದಲ್ಲಿ ಕೋಮು ಘರ್ಷಣೆಯನ್ನು ಹುಟ್ಟುಹಾಕಿದವು, ಅದು ನಂತರ ಗುರುಗ್ರಾಮ್ ಮತ್ತು ಇತರ ಪ್ರದೇಶಗಳಿಗೆ ಹರಡಿತು.

ಘರ್ಷಣೆಗೆ ಸಂಬಂಧಿಸಿದಂತೆ ಇದುವರೆಗೆ 113 ಎಫ್ ಐ ಆರ್ ಗಳನ್ನು ದಾಖಲಿಸಲಾಗಿದೆ ಮತ್ತು 305 ಜನರನ್ನು ಬಂಧಿಸಲಾಗಿದೆ. ಬಂಧಿತ 106 ಮಂದಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಹರ್ಯಾಣದ ಸುಮಾರು 30 ಖಾಪ್‌ಗಳು, ಸಂಯುಕ್ತ ಕಿಸಾನ್ ಮೋರ್ಚಾದ ಮುಖಂಡರು, ವಿವಿಧ ರೈತ ಸಂಘಗಳು ಮತ್ತು ವಿವಿಧ ಧರ್ಮಗಳ ಜನರು ಬುಧವಾರ ಹಿಸಾರ್ ಜಿಲ್ಲೆಯ ನಾರ್ನಾಂಡ್ ಪಟ್ಟಣದ ಬಾಸ್ ಗ್ರಾಮದಲ್ಲಿ ಮಹಾಪಂಚಾಯತ್ ನಡೆಸಿ ನುಹ್ ಕೋಮುಗಲಭೆಗೆ ಸಂಬಂಧಿಸಿದಂತೆ ಹಲವಾರು ನಿರ್ಣಯಗಳನ್ನು ಅಂಗೀಕರಿಸಿದರು.

ಭಾರತೀಯ ಕಿಸಾನ್ ಮಜ್ದೂರ್ ಯೂನಿಯನ್ ಆಯೋಜಿಸಿದ್ದ ಮಹಾಪಂಚಾಯತ್ ನಲ್ಲಿ ಹಿಂದೂಗಳು, ಮುಸ್ಲಿಮರು ಹಾಗೂ ಸಿಖ್ಖರು ಭಾಗವಹಿಸಿದ್ದರು. ಎಲ್ಲ ಧರ್ಮದ ಜನರು ಶಾಂತಿ ಸ್ಥಾಪನೆಗೆ ಶ್ರಮಿಸಬೇಕು ಎಂದು ಸಭೆ ನಿರ್ಣಯಿಸಿತು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News