×
Ad

ಇರಾನ್ ನಲ್ಲಿನ ಭಾರತೀಯ ನಾಗರಿಕರ ಸ್ಥಳಾಂತರ ಕಾರ್ಯಾಚರಣೆ ಆರಂಭಿಸಿದ ಭಾರತ

Update: 2025-06-17 13:34 IST

Photo credit: PTI

ಹೊಸದಿಲ್ಲಿ: ಇಸ್ರೇಲ್ ಮತ್ತು ಇರಾನ್‌ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿದ್ದಂತೆ, ಭಾರತವು ತನ್ನ ನಾಗರಿಕರನ್ನು ಇರಾನ್‌ನಿಂದ ಅರ್ಮೇನಿಯಾ ಮೂಲಕ ಸ್ಥಳಾಂತರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ಇರಾನ್ ನಲ್ಲಿ ಮಾತ್ರವಲ್ಲದೆ, ಇಸ್ರೇಲ್‌ನಿಂದಲೂ ತನ್ನ ನಾಗರಿಕರನ್ನು ಸ್ಥಳಾಂತರಿಸುವ ಯೋಜನೆಯಲ್ಲಿ ಭಾರತವು ಕೆಲಸ ಮಾಡುತ್ತಿದೆ.

ಟೆಹ್ರಾನ್‌ನಲ್ಲಿರುವ ಭಾರತದ ರಾಜತಾಂತ್ರಿಕ ಇಲಾಖೆಯು ತನ್ನ ಕಾರ್ಯಾಚರಣೆಯ ಮೂಲಕ ಇರಾನ್‌ನ ವಿವಿಧ ಸ್ಥಳಗಳಿಂದ 100 ಕ್ಕೂ ಹೆಚ್ಚು ಭಾರತೀಯ ನಾಗರಿಕರ ಮೊದಲ ತಂಡವನ್ನು ಅರ್ಮೇನಿಯಾ ದೇಶದ ಗಡಿಗೆ ಸ್ಥಳಾಂತರಿಸಿದೆ.

ಅವರು ಅರ್ಮೇನಿಯಾವನ್ನು ಪ್ರವೇಶಿಸಿದ ನಂತರ, ಅವರನ್ನು ಭಾರತಕ್ಕೆ ವಿಮಾನದ ಮೂಲಕ ಕರೆದೊಯ್ಯಲಾಗುವುದು ಎಂದು ಮೂಲಗಳು ತಿಳಿಸಿವೆ.

ಇರಾನ್‌ನಲ್ಲಿ ಪ್ರಸ್ತುತ ಸುಮಾರು 10000 ಭಾರತೀಯ ನಾಗರಿಕರು ವಾಸಿಸುತ್ತಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 26000 ಭಾರತೀಯರಿದ್ದಾರೆ.

ಟೆಹ್ರಾನ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯು ಭದ್ರತಾ ಪರಿಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಇರಾನ್‌ನಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತೊಡಗಿಸಿಕೊಂಡಿದೆ ಎಂದು ವಿದೇಶಾಂಗ ಸಚಿವಾಲಯ ಸೋಮವಾರ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News