×
Ad

ಭಾರತದ ಮಾಜಿ ಅಂಪೈರ್ ಪಿಲೂ ರಿಪೋರ್ಟರ್ ನಿಧನ

Update: 2023-09-03 21:42 IST

Photocredit : indianetzone.com

ಹೊಸದಿಲ್ಲಿ: ಭಾರತದ ಮಾಜಿ ಅಂತರಾಷ್ಟ್ರೀಯ ಅಂಪೈರ್ ಪಿಲೂ ರಿಪೋರ್ಟರ್ ರವಿವಾರ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು.

ತಮ್ಮ ಸುದೀರ್ಘ 28 ವರ್ಷಗಳ ವೃತ್ತಿಜೀವನದಲ್ಲಿ ಅವರು 14 ಟೆಸ್ಟ್ ಮತ್ತು 22 ಏಕದಿನ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. 1986 ರಲ್ಲಿ ಪಾಕಿಸ್ತಾನದ ಮಾಜಿ ನಾಯಕ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್  ನಡುವಿನ ಸರಣಿಯಲ್ಲಿ ಇನ್ನೊಬ್ಬ ಭಾರತೀಯ ವಿ. ಕೆ. ರಾಮಸ್ವಾಮಿ ಅವರೊಂದಿಗೆ ಕಾರ್ಯ ನಿರ್ವಹಿಸಲು ಆಹ್ವಾನಿಸಿದ್ದರು, 1912 ರ ನಂತರ ವಿಶ್ವದ ಮೊದಲ ತಟಸ್ಥ ಅಂಪೈರ್ ಎನಿಸಿಕೊಂಡಿದ್ದರು.

ಅವರು ಆಸ್ಟ್ರೇಲಿಯ-ನ್ಯೂಝಿಲ್ಯಾಂಡ್ ನಲ್ಲಿ ನಡೆದಿದ್ದ 1992ರ ವಿಶ್ವಕಪ್ ನಲ್ಲಿ ಕಾರ್ಯನಿರ್ವಹಿಸಿರುವ ಅಂಪೈರ್ ಗಳಲ್ಲಿ ಒಬ್ಬರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News