×
Ad

ಎಲ್ಲಾ ಮಾದರಿ ಕ್ರಿಕೆಟ್‌ ನಿಂದ ಮೋಹಿತ್ ಶರ್ಮಾ ನಿವೃತ್ತಿ

Update: 2025-12-03 21:51 IST

 ಮೋಹಿತ್ ಶರ್ಮಾ | Photo Credit : PTI 

ಮುಂಬೈ, ಡಿ. 3: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಮೋಹಿತ್ ಶರ್ಮಾ ಬುಧವಾರ ಎಲ್ಲಾ ಮಾದರಿಯ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿದ್ದಾರೆ.

37 ವರ್ಷದ ಮೋಹಿತ್, 2015ರ ವಿಶ್ವಕಪ್ ಸೇರಿದಂತೆ 26 ಏಕದಿನ ಪಂದ್ಯಗಳಲ್ಲಿ ಭಾರತದ ಪರವಾಗಿ ಆಡಿದ್ದಾರೆ ಹಾಗೂ 32.90 ಸರಾಸರಿಯಲ್ಲಿ 31 ವಿಕೆಟ್‌ ಗಳನ್ನು ಉರುಳಿಸಿದ್ದಾರೆ. ಅವರು ಎಂಟು ಅಂತರ್ರಾಷ್ಟ್ರೀಯ ಟಿ20 ಪಂದ್ಯಗಳಲ್ಲಿಯೂ ಆಡಿದ್ದು, ಆರು ವಿಕೆಟ್‌ ಗಳನ್ನು ಗಳಿಸಿದ್ದಾರೆ.

ಮೋಹಿತ್, 2013ರಲ್ಲಿ ಝಿಂಬಾಬ್ವೆ ವಿರುದ್ಧದ ಏಕದಿನ ಪಂದ್ಯದೊಂದಿಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಅದಕ್ಕೂ ಮೊದಲು, ಎರಡು ವರ್ಷಗಳ ಕಾಲ ಹರ್ಯಾಣ ತಂಡದಲ್ಲಿ ದೇಶಿ ಕ್ರಿಕೆಟ್ ಆಡಿದ್ದರು.

ಮೋಹಿತ್, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲೂ ಆಡಿದ್ದಾರೆ. ಮೊದಲು ಅವರು ಚೆನ್ನೈ ಸೂಪರ್ ಕಿಂಗ್ಸ್ ಪರವಾಗಿ ಆಡಿದರು. ಬಳಿಕ ಗುಜರಾತ್ ಟೈಟಾನ್ಸ್‌ ಗೆ ಸೇರ್ಪಡೆಗೊಂಡರು. 2023ರಲ್ಲಿ ಅವರು ಐಪಿಎಲ್‌ನಲ್ಲಿ 27 ವಿಕೆಟ್‌ಗಳನ್ನು ಪಡೆದಿದ್ದು, ಜಂಟಿ ಎರಡನೇ ಗರಿಷ್ಠ ವಿಕೆಟ್ ಗಳಿಕೆದಾರರಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News