×
Ad

ಜಾರ್ಖಂಡ್: ಪತ್ನಿಯ ಚಿತೆಗೆ ತಳ್ಳಿ ವೃದ್ಧನ ಸಜೀವ ದಹನ; ಓರ್ವ ಆರೋಪಿ ಬಂಧನ

Update: 2024-12-27 09:34 IST

ರಾಂಚಿ: ಹೊತ್ತಿ ಉರಿಯುತ್ತಿದ್ದ ಪತ್ನಿಯ ಚಿತೆಗೆ ವೃದ್ಧನೊಬ್ಬನನ್ನು ತಳ್ಳಿ ಸಜೀವವಾಗಿ ದಹಿಸಿದ ಅಮಾನುಷ ಘಟನೆ ಜಾರ್ಖಂಡ್ನ ಗುಮ್ಲಾದಿಂದ ವರದಿಯಾಗಿದೆ. ಮೃತಪಟ್ಟ ವ್ಯಕ್ತಿಯನ್ನು ಬುದ್ಧೇಶ್ವರ ಓರನ್ (60) ಎಂದು ಗುರುತಿಸಲಾಗಿದೆ.

ಸಂತ್ರಸ್ತ ವ್ಯಕ್ತಿಯ ಬಾವ ಝಾರಿ ಓರನ್ ಹಾಗೂ ಆತನ ಮಗ ಕರ್ಮಪಾಲ್ ಓರನ್ ಹಳೆ ವ್ಯಾಜ್ಯದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆ ಬುಧವಾರ ನಡೆದಿದ್ದರೂ, ಗುರುವಾರ ಝಾರಿ ಪೊಲೀಸ್ ಠಾಣೆಯಲ್ಲಿ ಶರಣಾದ ಬಳಿಕ ಬೆಳಕಿಗೆ ಬಂದಿದೆ.

ಚಿತಾಗ್ನಿಗೆ ಎಸೆಯುವ ಮುನ್ನ ಕೊಡಲಿಯಿಂದ ತಂದೆಗೆ ಹೊಡೆಯಲಾಗಿತ್ತು ಎಂದು ಮೃತ ವ್ಯಕ್ತಿಯ ಮಗ ಸಂದೀಪ್ ಓರನ್ ಆಪಾದಿಸಿದ್ದಾರೆ.

"ತಾಯಿ ಮಂಗ್ರಿದೇವಿ ಗ್ರಾಮದ ಬಾವಿಗೆ ಬಿದ್ದು ಮೃತಪಟ್ಟಿದ್ದರು. ತಂದೆ ಸೇರಿದಂತೆ ಕುಟುಂಬದವರು ಸೇರಿ ಅಂತ್ಯಸಂಸ್ಕಾರ ನೆರವೇರಿಸಿದೆವು. ಹಳೆಯ ವ್ಯಾಜ್ಯದ ಕಾರಣದಿಂದ ನನ್ನ ಸೋದರಮಾವ ಝಾರಿ ಓರನ್ ಮತ್ತು ಆತನ ಮಗ ಕರ್ಮಪಾಲ್ ಓರನ್ ನನ್ನ ತಂದೆಯನ್ನು ಹೊಡೆದು ತಾಯಿಯ ಚಿತೆಗೆ ತಳ್ಳಿ ಜೀವಂತವಾಗಿ ದಹಿಸಿದರು" ಎಂದು ಸಂದೀಪ್ ದೂರು ನೀಡಿದ್ದಾರೆ.

ತಂದೆಗೆ ಕೊಡಲಿಯಿಂದ ಹೊಡೆದಾಗ ಅಲ್ಲಿದ್ದ ಎಲ್ಲರೂ ಓಡಿಹೋದರು. ಬಳಿಕ ಝಾರಿ ಹಾಗೂ ಕರ್ಮಪಾಲ್ ತಂದೆಯನ್ನು ಚಿತೆಗೆ ಎಸೆದರು ಎಂದು ಆಪಾದಿಸಿದ್ದಾರೆ. ಘಟನೆಯನ್ನು ದೃಢಪಡಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News