×
Ad

ಮಧ್ಯಪ್ರದೇಶ: ಅಪ್ರಾಪ್ತೆಯ ಮೇಲೆ ಅತ್ಯಾಚಾರ;10 ದಿನದಲ್ಲಿ 5ನೇ ಪ್ರಕರಣ !

Update: 2023-12-25 07:51 IST

ಹೊಸದಿಲ್ಲಿ: ಮಧ್ಯಪ್ರದೇಶದ ಸಾತ್ನಾ ಜಿಲ್ಲೆಯ ಚಿತ್ರಕೂಟ ಪ್ರದೇಶದಲ್ಲಿ ಭಾನುವಾರ ಎಂಟು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ರಾಜ್ಯದಲ್ಲಿ ಕಳೆದ 10 ದಿನಗಳಲ್ಲಿ ಇಬ್ಬರು ಅಪ್ರಾಪ್ತ ವಯಸ್ಸಿನ ಬಾಲಕಿಯರು ಸೇರಿದಂತೆ ಐದು ಮಂದಿಯ ಮೇಲೆ ಅತ್ಯಾಚಾರ ನಡೆದ ಘಟನೆ ವರದಿಯಾಗಿದೆ.

ಪ್ರಕರಣ ಡಿಸೆಂಬರ್ 17ರಂದೇ ನಡೆದಿದ್ದರೂ, ಈ ಆಘಾತ ಹಾಗೂ ನೋವಿನಿಂದ ಬಾಲಕಿ ಮೌನರೋಧನದಿಂದ ಕಳೆಯುವಂತಾಗಿತ್ತು. ಬಾಲಕಿಯ ತಾಯಿ ಪಾರ್ಶ್ವವಾಯುವಿಗೆ ತುತ್ತಾಗಿ ಹಾಸಿಗೆ ಹಿಡಿದಿದ್ದು, ಪೊಲೀಸರಿಗೆ ಕೂಡಾ ಮಾಹಿತಿ ನೀಡಲು ಸಾಧ್ಯವಾಗಿಲ್ಲ.

ಕೆಲಸಕ್ಕಾಗಿ ಬೇರೆ ಕಡೆಗೆ ತೆರಳಿದ್ದ ತಂದೆ ಡಿ.22ರಂದು ಮನೆಗೆ ಮರಳಿದ ಬಳಿಕ ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಪೊಲೀಸರು ಈ ಸಂಬಂಧ19 ವರ್ಷದ ಯುವಕನೊಬ್ಬನನ್ನು ಬಂಧಿಸಿದ್ದು, ಆರೋಪಿಯನ್ನು ಕೋರ್ಟಿಗೆ ಹಾಜರುಪಡಿಸಿ ಜೈಲಿಗೆ ಕಳುಹಿಸಲಾಗಿದೆ ಎಂದು ಎಸ್ಪಿ ಅಶುತೋಶ್ ಗುಪ್ತ ಹೇಳಿದ್ದಾರೆ.

ಬಾಲಕಿ ಡಿಸೆಂಬರ್ 17ರಂದು ಮನೆಯಂಗಳದಲ್ಲಿ ಆಡುತ್ತಿದ್ದಾಗ ಆಕೆಯನ್ನು ಪುಸಲಾಯಿಸಿ ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಮಗು ಅಳುತ್ತಾ ಬಂದು ತನ್ನ ನೋವನ್ನು ತಾಯಿಯ ಜತೆ ಹಂಚಿಕೊಂಡಿದ್ದು, ಅಸ್ವಸ್ಥರಾದ ತಾಯಿ ಏನೂ ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿದ್ದರು ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News