×
Ad

ತಮಿಳು ನಟ ವಿಜಯ್ ಮೇಲೆ ಚಪ್ಪಲಿ ಎಸೆದ ದುಷ್ಕರ್ಮಿಗಳು!

Update: 2023-12-29 18:24 IST

ಚೆನ್ನೈ : ವಿಜಯಕಾಂತ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ ತಮ್ಮ ಕಾರಿನ ಬಳಿ ವಾಪಾಸಾಗುತಿದ್ದ ವೇಳೆ ತಮಿಳು ನಟ ವಿಜಯ್ ಅವರ ಮೇಲೆ ದುಷ್ಕರ್ಮಿಗಳು ಚಪ್ಪಲಿ ಎಸೆದಿರುವ ವೀಡಿಯೋ ವೈರಲಾಗಿದೆ.

ತಮಿಳು ನಟ, ಡಿಎಂಡಿಕೆ ಪಕ್ಷದ ನಾಯಕ ʼಕ್ಯಾಪ್ಟನ್ʼ ವಿಜಯಕಾಂತ್ ಗುರುವಾರ ಬೆಳಗ್ಗೆ ವಿಧಿವಶರಾದರು. ವಿಜಯಕಾಂತ್ ಅವರ ಪಾರ್ಥಿವ ಶರೀರಕ್ಕೆ ನಮನ ಸಲ್ಲಿಸಿದ ವಿಜಯ್, ಅವರನ್ನು ನೋಡಿ ಭಾವುಕರಾದರು. ವಿಜಯಕಾಂತ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

ಪಾರ್ಥೀವ ಶರೀರಕ್ಕೆ ನಮನ ಸಲ್ಲಿಸಿದ ಬಳಿಕ ನಟ ವಿಜಯ್ ಕಾರಿನ ಬಳಿ ಬರುತ್ತಿದ್ದಾಗ, ಗುಂಪಿನಿಂದ ಯಾರೋ ಅವರ ಮೇಲೆ ಚಪ್ಪಲಿ ಎಸೆದಿದ್ದಾರೆ ಎನ್ನಲಾಗಿದೆ. ವಿಜಯ್ ಅಭಿಮಾನಿಗಳು ಸೇರಿದಂತೆ ಹಲವರು ಈ ಕೃತ್ಯದ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News