ಹಣ ಅಕ್ರಮ ವರ್ಗಾವಣೆ ಪ್ರಕರಣ : ಈ.ಡಿ. ಮಂದೆ ಹಾಜರಾದ ಸೋನು ಸೂದ್
ಸೋನು ಸೂದ್ | PTI
ಹೊಸದಿಲ್ಲಿ, ಸೆ. 24: ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಗೆ ನಂಟು ಹೊಂದಿದ ಅಕ್ರಮ ಹಣ ವರ್ಗಾವಣೆ ಪ್ರಕರಣದ ವಿಚಾರಣೆಗೆ ನಟ ಸೋನು ಸೂದ್ ಬುಧವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದಾರೆ.
ಸೋನು ಸೂದ್ (52) ಮಧ್ಯಾಹ್ನ ಸುಮಾರು 12 ಗಂಟೆ ಕೇಂದ್ರ ದಿಲ್ಲಿಯಲ್ಲಿರುವ ಜಾರಿ ನಿರ್ದೇಶನಾಲಯದ ಕಚೇರಿಗೆ ಹಾಜರಾದರು. ಅವರ ಹೇಳಿಕೆಯನ್ನು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ)ಯ ನಿಯಮಗಳ ಅಡಿಯಲ್ಲಿ ದಾಖಲಿಸಿಕೊಳ್ಳಲಾಯಿತು.
ಪ್ರಚಾರ ಚಟುವಟಿಕೆಗಳಿಗಾಗಿ ಸೋನು ಸೂದ್ ಹಾಗೂ ಇತರ ಸೆಲಬ್ರೆಟಿಗಳು 1xBet ನಿಂದ ಹಣ ಸ್ವೀಕರಿಸಿದ್ದಾರೆಯೇ ಎಂಬ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
ಯುವರಾಜ್ ಸಿಂಗ್, ಸುರೇಶ್ ರೈನಾ, ಶಿಖರ್ ಧವನ್, ರಾಬಿನ್ ಉತ್ತಪ್ಪರಂತಹ ಮಾಜಿ ಕ್ರಿಕಿಟಿಗರು ಮತ್ತು ಮಿಮಿ ಚಕ್ರವರ್ತಿ ಮತ್ತು ಅಂಕುಶ್ ಹಜ್ರಾ ಅವರಂತಹ ನಟಿ-ರಾಜಕಾರಣಿಗಳು ಸೇರಿದಂತೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿ ಮಾಡಿರುವ ಉನ್ನತ ವ್ಯಕ್ತಿಗಳಲ್ಲಿ ಸೋನು ಸೂದ್ ಇತ್ತೀಚಿನವರು.