ಭಾರತದ ಪ್ರತಿ ಮೂಲೆಯಲ್ಲೂ ಪ್ರೀತಿಯ ಅಂಗಡಿ ತೆರೆಯಿರಿ: ಮತದಾರರಿಗೆ ರಾಹುಲ್ ಗಾಂಧಿ ಕರೆ

Update: 2024-04-19 06:50 GMT

ರಾಹುಲ್ ಗಾಂಧಿ | PC : X \ @RahulGandhi

ಹೊಸ ದಿಲ್ಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ಪ್ರಾರಂಭಗೊಂಡಿದ್ದು, ಪ್ರಜಾಪ್ರಭುತ್ವವನ್ನು ಬಲಪಡಿಸಿ ಹಾಗೂ ದ್ವೇಷವನ್ನು ಮಣಿಸುವ ಮೂಲಕ ದೇಶದ ಪ್ರತಿ ಮೂಲೆಯಲ್ಲೂ ಪ್ರೀತಿಯ ಅಂಗಡಿ ತೆರೆಯಿರಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತದಾರರಲ್ಲಿ ಮನವಿ ಮಾಡಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯ್ಮದಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, “ಇಂದು ಮತದಾನದ ಪ್ರಥಮ ಹಂತ! ನೆನಪಿಡಿ, ನಿಮ್ಮ ಪ್ರತಿಯೊಂದು ಮತವೂ ಭಾರತದ ಪ್ರಜಾತಂತ್ರದ ಭವಿಷ್ಯ ಹಾಗೂ ಅದರ ಪೀಳಿಗೆಗಳನ್ನು ನಿರ್ಧರಿಸಲಿದೆ” ಎಂದು ಬರೆದುಕೊಂಡಿದ್ದಾರೆ.

“ಕಳೆದ ಹತ್ತು ವರ್ಷಗಳಲ್ಲಿ ದೇಶದ ಆತ್ಮಕ್ಕೆ ಆಗಿರುವ ಗಾಯಗಳಿಗೆ ನಿಮ್ಮ ಮತವೆಂಬ ಮುಲಾಮನ್ನು ಹಚ್ಚುವ ಮೂಲಕ ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಿ” ಎಂದು ಅವರು ಮನವಿ ಮಾಡಿದ್ದಾರೆ.

ದ್ವೇಷವನ್ನು ಮಣಿಸುವ ಮೂಲಕ ದೇಶದ ಪ್ರತಿ ಮೂಲೆಯಲ್ಲೂ ಪ್ರೀತಿಯ ಅಂಗಡಿಯನ್ನು ತೆರೆಯಿರಿ ಎಂದೂ ಅವರು ಕರೆ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷವು ಜನರಿಗೆ ನೀಡಿರುವ ಪ್ರಮುಖ ಗ್ಯಾರಂಟಿಗಳಾದ ಅಪ್ರೆಂಟಿಸ್ಶಿತಪ್, ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಬಲ ಹಾಗೂ ದೇಶವ್ಯಾಪಿ ಜಾತಿ ಜನಗಣತಿಯ ಭರವಸೆಗಳ ಗ್ರಾಫಿಕ್ ಚಿತ್ರವನ್ನು ರಾಹುಲ್ ಗಾಂಧಿ ತಮ್ಮ ಪೋಸ್ಟ್ ನೊಂದಿಗೆ ಹಂಚಿಕೊಂಡಿದ್ದಾರೆ.

ಇಂದಿನಿಂದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಪ್ರಾರಂಭವಾಗಿದ್ದು, ಒಟ್ಟು 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News