×
Ad

ಫೆಲೆಸ್ತೀನ್‌ ಪರ ರ‍್ಯಾಲಿ | ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್, ಸಿಪಿಐ ನಾಯಕಿ ಆ್ಯನಿ ರಾಜಾ ಪೊಲೀಸ್ ವಶಕ್ಕೆ

Update: 2024-08-09 22:13 IST

PC : X 

ಹೊಸದಿಲ್ಲಿ : ಗಾಝಾದಲ್ಲಿ ಕದನ ವಿರಾಮಕ್ಕೆ ಕರೆ ನೀಡಿ ಹಾಗೂ ಇಸ್ರೇಲ್‌ ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿ ಹೊಸದಿಲ್ಲಿಯಲ್ಲಿ ಶುಕ್ರವಾರ ರ‍್ಯಾಲಿ ನಡೆಸಿದ ಅರ್ಥಶಾಸ್ತ್ರಜ್ಞ ಜೀನ್ ಡ್ರೆಝ್, ಸಿಪಿಐ ನಾಯಕಿ ಆ್ಯನಿ ರಾಜಾ ಹಾಗೂ ಇತರರನ್ನು ದಿಲ್ಲಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಪ್ರತಿಭಟನೆಯ ಕುರಿತು ಮಾಹಿತಿ ನೀಡಿದ ಹೊರತಾಗಿಯೂ ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ ಎಂದು ‘ಇಂಡಿಯನ್ಸ್ ಫಾರ್ ಪೆಲೆಸ್ತೀನ್ ಕಲೆಕ್ಟಿವ್’ನ ಭಾಗವಾಗಿರುವ ಸಾಮಾಜಿಕ ಹೋರಾಟಗಾರರು ಹಾಗೂ ಸಮಾಜ ವಿಜ್ಞಾನಿಗಳನ್ನು ಒಳಗೊಂಡ ಪ್ರತಿಭಟನಕಾರರು ಆರೋಪಿಸಿದ್ದಾರೆ.

ಹೊಸದಿಲ್ಲಿಯಲ್ಲಿರುವ ಇಸ್ರೇಲ್‌ನ ರಾಯಭಾರಿ ಕಚೇರಿಗೆ ರ‍್ಯಾಲಿ ನಡೆಸುತ್ತಿರುವ ಸಂದರ್ಭ ಪ್ರತಿಭಟನಕಾರರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

‘‘ನಾವು ಘೋಷಣೆಗಳನ್ನು ಕೂಡ ಕೂಗಿಲ್ಲ. ಬ್ಯಾನರ್‌ಗಳ ಎದುರು ಮೌನವಾಗಿ ನಿಂತಿದ್ದೆವು. ಆದರೆ, ಪೊಲೀಸರು ನಮ್ಮನ್ನು ಬಂಧಿಸಿದ್ದಾರೆ’’ ಎಂದು ಡ್ರೆಝ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News