×
Ad

ಪ್ರವಾದಿ ಪೈಗಂಬರ್ ಅವಹೇಳನ ವಿರೋಧಿಸಿ ಪ್ರತಿಭಟನೆ : ಪೊಲೀಸರು ಕನಿಷ್ಠ 10-20 ಮಂದಿಯನ್ನು ಗುಂಡಿಟ್ಟು ಹತ್ಯೆಗೈಯ್ಯಬೇಕಿತ್ತು ಎಂದ ಬಿಜೆಪಿ ಶಾಸಕ

Update: 2024-10-06 20:48 IST

PC: ETV Bharat

ಘಾಝಿಯಾಬಾದ್ : ಶುಕ್ರವಾರ ರಾತ್ರಿ ಪ್ರತಿಭಟನಾಕಾರರು ದಸ್ನಾ ದೇವಾಲಯದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆರೋಪಿಸಿರುವ ಘಾಝಿಯಾಬಾದ್ ನ ಲೋನಿ ವಿಧಾನಸಭಾ ಕ್ಷೇತ್ರದ ಶಾಸಕ ನಂದ್ ಕಿಶೋರ್ ಗುರ್ಜರ್, ಪೊಲೀಸರು ದಾಳಿಕೋರರ ಮೇಲೆ ಗುಂಡಿನ ದಾಳಿ ನಡೆಸಬೇಕಿತ್ತು ಎಂದು ಆಗ್ರಹಿಸಿದ್ದಾರೆ.

ಒಂದು ವೇಳೆ ಪೊಲೀಸರ ಗುಂಡಿನ ದಾಳಿಯಲ್ಲಿ 10-20 ಮಂದಿ ಸಾವನ್ನಪ್ಪಿದ್ದಿದ್ದರೆ, ಗಲಭೆಕೋರರೇ ಇರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ ಎಂದು ಹೇಳಲಾಗಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಪ್ರವಾದಿ ಪೈಗಂಬರರ ವಿರುದ್ಧ ಹೇಳಿಕೆ ನೀಡಿದ್ದ ನರಸಿಂಗಾನಂದ್ ವಾಸಿಸುವ ದಸ್ನಾ ದೇವಿ ದೇವಾಲಯದೆದುರು ಶುಕ್ರವಾರ ರಾತ್ರಿ ಭಾರಿ ಸಂಖ್ಯೆಯ ಗುಂಪೊಂದು ಪ್ರತಿಭಟನೆ ನಡೆಸಿತು. ಈ ಸಂಬಂಧ ವಿವಾದಾತ್ಮಕ ಅರ್ಚಕ ನರಸಿಂಗಾನಂದ್ ವಿರುದ್ಧ ಹಲವಾರು ಎಫ್ಐಆರ್ ದಾಖಲಾಗಿವೆ.

ಈ ನಡುವೆ, ಪ್ರತಿಭಟನೆಗೆ ಸಂಬಂಧಿಸಿದಂತೆ ದಸ್ನಾ ಪೊಲೀಸ್ ಹೊರಠಾಣೆಯ ಉಸ್ತುವಾರಿ ಸಬ್ ಇನ್ಸ್ ಪೆಕ್ಟರ್ ನೀಡಿರುವ ದೂರನ್ನು ಆಧರಿಸಿ 150 ಮಂದಿಯ ವಿರುದ್ಧ ವೇವ್ ಸಿಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News