×
Ad

ಆದಿತ್ಯ‌ನಾಥ್‌ ಅವರ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಟ ರಜನಿಕಾಂತ್

Update: 2023-08-19 23:30 IST

 ರಜನಿಕಾಂತ್, ಆದಿತ್ಯನಾಥ್ | Photo: ANI 

ಲಕ್ನೋ: ತಮಿಳು ನಟ ರಜನಿಕಾಂತ್ ಅವರು ಶನಿವಾರ ಲಕ್ನೋದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಭೇಟಿಯಾಗಿದ್ದಾರೆ.

ತಮ್ಮ ಹೊಸ ಚಿತ್ರವಾದ 'ಜೈಲರ್' ಅನ್ನು ಮುಖ್ಯಮಂತ್ರಿ ಆದಿತ್ಯನಾಥ್ ಜೊತೆ ವೀಕ್ಷಿಸುವ ಸಲುವಾಗಿ ರಜನಿಕಾಂತ್ ಉತ್ತರಪ್ರದೇಶಕ್ಕೆ ತಲುಪಿದ್ದಾರೆ.

“ನಾನು ಸಿಎಂ ಜೊತೆ ಸಿನಿಮಾ ನೋಡುತ್ತೇನೆ. ಚಿತ್ರ ಹಿಟ್ ಆಗುತ್ತಿರುವುದು ದೇವರ ಆಶೀರ್ವಾದ” ಎಂದು ರಜನಿಕಾಂತ್ ಅವರು ANI ಗೆ ತಿಳಿಸಿದ್ದಾರೆ.

ಆದಿತ್ಯನಾಥ್‌ರನ್ನು ಭೇಟಿಯಾದ ರಜನಿಕಾಂತ್, ಅವರ ಕಾಲಿಗೆ ಬಿದ್ದು ಆಶಿರ್ವಾದ ಪಡೆದಿದ್ದಾರೆ. ಈ ಚಿತ್ರಗಳು ವೈರಲ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News