×
Ad

ಮರಗಳನ್ನು ಇದ್ದ ಹಾಗೇ ಬಿಟ್ಟು 100 ಕೋಟಿ ರೂ. ವೆಚ್ಚದಲ್ಲಿ ರಸ್ತೆ ವಿಸ್ತರಣೆ: ವಿವಾದಕ್ಕೀಡಾದ ಬಿಹಾರದ ಮತ್ತೊಂದು ಯೋಜನೆ

Update: 2025-06-30 17:54 IST

PC : NDTV 

ಪಾಟ್ನಾ: ಗುಂಡಿಗಳಿಲ್ಲದ, ಅಂಕು ಡೊಂಕಿಲ್ಲದ ಹೊಸದಾಗಿ ನಿರ್ಮಾಣವಾದ ರಸ್ತೆಯಲ್ಲಿ ನೀವು ವಾಹನ ಚಲಾಯಿಸುತ್ತಿದ್ದೀರಿ ಎಂದು ಕಲ್ಪಿಸಿಕೊಳ್ಳಿ. ಹೀಗಿರುವಾಗ ಅಚಾನಕ್ ಆಗಿ ಸಾಲು ಮರಗಳು ರಸ್ತೆ ಮಧ್ಯೆಯೇ ಕಾಣಿಸಿಕೊಂಡರೆ ಪರಿಸ್ಥಿತಿ ಹೇಗಿರಬಹುದು?

ಇಂತದ್ದೊಂದು ಸನ್ನಿವೇಶ ಬಿಹಾರದ ರಾಜಧಾನಿ ಪಾಟ್ನಾದಿಂದ 50 ಕಿ.ಮೀ ದೂರದಲ್ಲಿರುವ ಜೆಹಾನಾಬಾದ್‌ ನಲ್ಲಿನ ವಾಹನ ಚಾಲಕರಿಗೆ ಅನುಭವವಾಗಿದೆ. 100 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ರಸ್ತೆ ವಿಸ್ತರಣೆ ಯೋಜನೆಯು ಇದೀಗ ವಿವಾದಕ್ಕೆ ಗುರಿಯಾಗಿದೆ.

ಪಾಟ್ನಾ-ಗಯಾ ಮುಖ್ಯ ರಸ್ತೆಯಲ್ಲಿರುವ ಜೆಹಾನಾಬಾದ್‌ನಲ್ಲಿ, 7.48 ಕಿ.ಮೀ ಉದ್ದದ ರಸ್ತೆಯ ಮಧ್ಯದಲ್ಲಿ ಮರಗಳು ಎತ್ತರವಾಗಿ ನಿಂತಿದ್ದು, ಅಪಘಾತಗಳಿಗೆ ಎಡೆಮಾಡುವಂತೆ ಇದೆ. ಹಾಗಂತ ಈ ಮರಗಳು ರಾತ್ರೋರಾತ್ರಿ ಬೆಳೆದಿದ್ದಲ್ಲ.

►ನಡೆದಿದ್ದೇನು?

ಜಿಲ್ಲಾಡಳಿತ 100 ಕೋಟಿ ರೂ. ವೆಚ್ಚದ ರಸ್ತೆ ವಿಸ್ತರಣೆ ಯೋಜನೆಯನ್ನು ಕೈಗೆತ್ತಿಕೊಂಡಾಗ, ಮರಗಳನ್ನು ಕಡಿದುಹಾಕಲು ಅನುಮತಿ ಕೋರಿ ಅರಣ್ಯ ಇಲಾಖೆಯನ್ನು ಸಂಪರ್ಕಿಸಿತ್ತು. ಆದರೆ ಜಿಲ್ಲಾಡಳಿತದ ಬೇಡಿಕೆಯನ್ನು ಅರಣ್ಯ ಇಲಾಖೆ ತಿರಸ್ಕರಿಸಿದ್ದು, ರಸ್ತೆ ವಿಸ್ತರಣೆಗೆ ಬೇಕಿದ್ದ 14 ಹೆಕ್ಟೇರ್ ಅರಣ್ಯ ಭೂಮಿಗೆ ಪರಿಹಾರವನ್ನು ನೀಡುವಂತೆ ಅರಣ್ಯ ಇಲಾಖೆ ಕೋರಿತು. ಆದರೆ, ಜಿಲ್ಲಾಡಳಿತಕ್ಕೆ ವಿನಂತಿಯನ್ನು ಪೂರೈಸಲು ಸಾಧ್ಯವಾಗಲಿಲ್ಲ. ಅದಾಗ್ಯೂ, ರಸ್ತೆ ವಿಸ್ತರಣೆ ಯೋಜನೆಯನ್ನು ಜಿಲ್ಲಾಡಳಿತವು ಪೂರ್ಣಗೊಳಿಸಿದ್ದೇ ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿದೆ.

ಮರಗಳು ರಸ್ತೆಯ ಮಧ್ಯದಲ್ಲಿ ಇರುವಂತೆಯೇ ರಸ್ತೆಯನ್ನು ಅಗಲೀಕರಿಸಿದ್ದು, ಹೊಸದಾಗಿ ವಿಸ್ತರಣೆಯಾದ ಮಾರ್ಗ ಮಧ್ಯೆಯೇ ಮರಗಳನ್ನು ಹಾಗೆಯೇ ಉಳಿಸಲಾಗಿದೆ. ಇದರಿಂದಾಗಿ ಇಲ್ಲಿ ರಸ್ತೆ ಅಪಘಾತಗಳೂ ನಡೆದಿದೆ ಎಂದು ದಾರಿಹೋಕರೊಬ್ಬರು ತಿಳಿಸಿದ್ದಾರೆ.

ಒಟ್ಟಾರೆ, ಸರ್ಕಾರದ ಬೇರೆ ಬೇರೆ ಇಲಾಖೆಗಳ ಸಮನ್ವಯ ಕೊರತೆಯಿಂದಾಗಿ 100 ಕೋಟಿ ರೂ. ಮೌಲ್ಯದ ಯೋಜನೆಯೊಂದು ಅಸಂಬದ್ಧವಾಗಿ ಪೂರ್ತಿಗೊಂಡಿದೆ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News