ವೇದಿಕೆಯಲ್ಲೇ ನಿದ್ದೆಗೆ ಜಾರಿದ ದಕ್ಷಿಣ ಆಫ್ರಿಕಾ ನಾಯಕ ತೆಂಬಾ ಬಾವುಮಾ; ಫೊಟೋ ವೈರಲ್
Update: 2023-10-04 23:51 IST
ತೆಂಬಾ ಬವುಮಾ | Photo: X \ @Cricketracker
ಅಹಮದಾಬಾದ್ : ಏಕದಿನ ಕ್ರಿಕೆಟ್ ವಿಶ್ವಕಪ್ 2023 ರ ನಾಯಕರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ದಕ್ಷಿಣ ಆಫ್ರಿಕಾದ ನಾಯಕ ತೆಂಬಾ ಬವುಮಾ ವೇದಿಕೆಯಲ್ಲಿ ಮಲಗಿರುವ ಚಿತ್ರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಚಿತ್ರಕ್ಕೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, "ಊಟದ ನಂತರ ಕೆಲಸದಲ್ಲಿ ನನ್ನನ್ನು ನೆನಪಿಸುತ್ತದೆ" ಎಂದಿದ್ದಾರೆ.
“ಮೀಮ್ ಟೆಂಪ್ಲೇಟ್ ನೀಡಿದ್ದಕ್ಕಾಗಿ ಧನ್ಯವಾದಗಳು," ಎಂದು ಮತ್ತೊಬ್ಬ ಅಭಿಮಾನಿ ಬರೆದಿದ್ದಾರೆ. "ಬಾವುಮಾ ಊಟಕ್ಕೆ ಬಿರಿಯಾನಿ ಮತ್ತು ಗುಲಾಬ್ ಜಾಮೂನ್ ತಿಂದಿದ್ದಾರೆ ಎಂದು ಇನ್ನೊಬ್ಬ ಅಭಿಮಾನಿ ಕಮೆಂಟ್ ಮಾಡಿದ್ದಾರೆ.