ದೇಶದ ಜನತೆ ಸತತ ಮೂರನೇ ಬಾರಿ ಎನ್ ಡಿ ಎ ಮೇಲೆ ವಿಶ್ವಾಸ ತೋರಿದ್ದಾರೆ : ಪ್ರಧಾನಿ ನರೇಂದ್ರ ಮೋದಿ
Update: 2024-06-04 19:41 IST
ನರೇಂದ್ರ ಮೋದಿ | PC : X
ಹೊಸದಿಲ್ಲಿ : ದೇಶದ ಜನತೆ ಸತತ ಮೂರನೇ ಬಾರಿಗೆ ಎನ್‌ಡಿಎ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಭಾರತದ ಇತಿಹಾಸದಲ್ಲಿ ಇದೊಂದು ಅಭೂತಪೂರ್ವ ಕ್ಷಣ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಚುನಾವಣಾ ಫಲಿತಾಂಶದ ಬಳಿಕ ತಮ್ಮ ಎಕ್ಸ್ ಖಾತೆಯಲ್ಲಿ ಅವರು, “ಈ ಪ್ರೀತಿ ಮತ್ತು ಆಶೀರ್ವಾದಕ್ಕಾಗಿ ನಾನು ನನ್ನ ಕುಟುಂಬಕ್ಕೆ ಧನ್ಯವಾದಗಳನ್ನು ತಿಳಿಸುತ್ತೇನೆ. ಅವರ ಆಕಾಂಕ್ಷೆಗಳನ್ನು ಈಡೇರಿಸಲು, ನಾವು ಹೊಸ ಶಕ್ತಿ, ಹೊಸ ಉತ್ಸಾಹ ಮತ್ತು ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತೇವೆ ಎಂದು ದೇಶದ ಜನೆತೆಗೆ ಭರವಸೆ ನೀಡುತ್ತೇನೆ. ಎಲ್ಲಾ ಕಾರ್ಯಕರ್ತರಿಗೆ ನನ್ನ ಹೃತ್ಪೂರ್ವಕ ಕೃತಜ್ಞತೆಗಳು. ಅವರು ಮಾಡಿದ ಸಮರ್ಪಣೆ ಮತ್ತು ದಣಿವರಿಯದ ಶ್ರಮಕ್ಕೆ ನನ್ನ ಅಭಿನಂದನೆಗಳು” ಎಂದು ಪೋಸ್ಟ್ ಮಾಡಿದ್ದಾರೆ.