×
Ad

ಟೊಮೆಟೊ ಬೆಲೆ ಏರಿಕೆಗೆ ಕೇಂದ್ರದ ತಪ್ಪು ನಿರ್ಧಾರಗಳು ಕಾರಣ: ಕಾಂಗ್ರೆಸ್

Update: 2023-06-28 22:11 IST

Photo : PTI

ಹೊಸದಿಲ್ಲಿ: ಕೆಲವು ನಗರಗಳಲ್ಲಿ ಟೊಮೆಟೊ ಬೆಲೆ ಕಿಲೋ ಒಂದಕ್ಕೆ 100 ರೂ. ದಾಟಲು ಕೇಂದ್ರ ಸರಕಾರದ ದೋಷಪೂರಿತ ನೀತಿಗಳೇ ಕಾರಣ ಎಂದು ಕಾಂಗ್ರೆಸ್ ಮಂಗಳವಾರ ಆರೋಪಿಸಿದೆ.

ಈ ನಡುವೆ, ಮುಂಗಾರು ಮಳೆ ವಿಳಂಬದಿಂದಾಗಿ ಟೊಮೆಟೊ ಬೆಲೆಯಲ್ಲಿ ಏರಿಕೆ ಆಗಿದೆ ಹಾಗೂ ಶೀಘ್ರವೇ ಬೆಲೆ ಇಳಿಯಲಿದೆ ಎಂದು ಸರಕಾರ ಹೇಳಿದೆ.

ಮಂಗಳವಾರ ದೇಶಾದ್ಯಂತ ಟೊಮೆಟೊದ ಸರಾಸರಿ ದರ ಕಿಲೋಗ್ರಾಮ್ ಗೆ 46.10 ರೂ. ಆಗಿತ್ತು. ಇದು ಒಂದು ತಿಂಗಳ ಹಿಂದಿನ ದರ (23.61 ರೂ.)ಕ್ಕಿಂತ ದುಪ್ಪಟ್ಟು ಆಗಿದೆ. ಟೊಮೆಟೊದ ಗರಿಷ್ಠ ದರ ಕೆಜಿಗೆ 122 ರೂ. ಆಗಿತ್ತು.

ಟೊಮೆಟೊ , ನೀರುಳ್ಳಿ ಮತ್ತು ಬಟಾಟೆ ಕೃಷಿ ತನ್ನ ಸರಕಾರದ ‘‘ಪ್ರಥಮ ಆದ್ಯತೆ’’ ಎಂಬುದಾಗಿ ಪ್ರಧಾನಿ ಹೇಳಿದ್ದರು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಟ್ವೀಟ್ ಮಾಡಿದ್ದಾರೆ.

‘‘ಆದರೆ, ಅವರ ತಪ್ಪು ನೀತಿಗಳಿಂದಾಗಿ, ಮೊದಲು ಬೆಲೆಯಿಲ್ಲದೆ ರೈತರು ಟೊಮ್ಯಾಟೊಗಳನ್ನು ರಸ್ತೆಗೆ ಎಸೆದರು ಮತ್ತು ಈಗ ಅದು ಕಿಲೋಗೆ 100 ರೂ.ಗೆ ಮಾರಾಟವಾಗುತ್ತಿದೆ ಎಂದು ಅವರು ಹೇಳಿದರು.

‘‘ಬೇಳೆಕಾಳುಗಳು, ಹಿಟ್ಟು, ಎಣ್ಣೆ ಮತ್ತು ಈಗ ತರಕಾರಿಗಳು ಬಡವರ ತಟ್ಟೆಯಿಂದ ಕಾಣೆಯಾಗುತ್ತಿವೆ. ಮೋದೀಜಿ, ಭಾರತದ ಆರ್ಥಿಕತೆಯ ಬಗ್ಗೆ ನೀವು ವಿದೇಶಗಳಲ್ಲಿ ದೊಡ್ಡ ದೊಡ್ಡ ಹೇಳಿಕೆಗಳನ್ನು ನೀಡುತ್ತೀರಿ. ಆದರೆ, ಬೆಲೆ ಏರಿಕೆಯು ನಿಮ್ಮ ನಿಯಂತ್ರಣ ತಪ್ಪಿದೆ’’ ಎಂದು ಕಾಂಗ್ರೆಸ್ ನ ಮಹಿಳಾ ಘಟಕದ ನೆಟ್ಟಾ ಡಿಸೋಜ ಟ್ವೀಟ್ ಮಾಡಿದ್ದಾರೆ.

ಕೆಲವು ತಿಂಗಳ ಹಿಂದೆ ಟೊಮೆಟೊದ ಸಗಟು ಮಾರಾಟ ದರವು ಆಘಾತಕಾರಿಯಾಗಿ ಕುಸಿದಿತ್ತು. ಹಾಗಾಗಿ, ಹೆಚ್ಚಿನ ರೈತರು ತಮ್ಮ ಬೆಳೆಯನ್ನು ಬಿಟ್ಟು ಬಿಟ್ಟರು. ಅದರಿಂದಾಗಿ ಈಗ ಟೊಮ್ಯಾಟೊ ದರ ಹೆಚ್ಚಾಗಿದೆ ಎಂದು ರೈತರು ಹೇಳುತ್ತಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News