×
Ad

ತಮಿಳುನಾಡು | ಕಾಲ್ತುಳಿತದ ಬಗ್ಗೆ ಸ್ವತಂತ್ರ ತನಿಖೆ ಕೋರಿ ಮದ್ರಾಸ್ ಹೈಕೋರ್ಟ್ ಮೊರೆ ಹೋದ ವಿಜಯ್ ನೇತೃತ್ವದ ಟಿವಿಕೆ

ಘಟನೆಯ ಹಿಂದೆ ಪಿತೂರಿಯಿದೆ ಎಂದು ಆರೋಪಿಸಿದ ಪಕ್ಷ

Update: 2025-09-28 15:11 IST

Photo credit: PTI

ಚೆನ್ನೈ : ತಮಿಳುನಾಡಿನ ಕರೂರ್ ಜಿಲ್ಲೆಯಲ್ಲಿ ನಟ ವಿಜಯ್ ನೇತೃತ್ವದಲ್ಲಿ ಆಯೋಜಿಸಿದ್ದ ರ‍್ಯಾಲಿಯ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತದ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವಂತೆ ಕೋರಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷ  ಸಲ್ಲಿಸಿದ ತುರ್ತು ಮನವಿಯನ್ನು ಮದ್ರಾಸ್ ಹೈಕೋರ್ಟ್ ಸ್ವೀಕರಿಸಿದೆ.

ಟಿವಿಕೆ ಪರ ವಕೀಲರು ಸಲ್ಲಿಸಿದ ತುರ್ತು ಮನವಿಯನ್ನು ನ್ಯಾಯಮೂರ್ತಿ ದಂಡಪಾಣಿ ಸ್ವೀಕರಿಸಿದ್ದು, ಈ ಕುರಿತು ನಾಳೆ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದಲ್ಲಿ ವಿಚಾರಣೆ ನಡೆಯುವ ಸಾಧ್ಯತೆ ಇದೆ.

ಘಟನೆಯ ಹಿಂದೆ ಕೆಲವು ಪಿತೂರಿಯಿದೆ ಎಂದು ಟಿವಿಕೆ ಪಕ್ಷವು ಆರೋಪಿಸಿದೆ. ಈ ಕುರಿತು ಸ್ವತಂತ್ರ ತನಿಖೆಯನ್ನು ನಡೆಸುವಂತೆ ಕೋರಿದೆ.

ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರದ ಭಾಗವಾಗಿ ಟಿವಿಕೆ ಪಕ್ಷವು ತಮಿಳುನಾಡಿನ ವಿವಿಧ ಭಾಗಗಳಲ್ಲಿ ರಾಜಕೀಯ ರ‍್ಯಾಲಿಗಳನ್ನು ನಡೆಸುತ್ತಿದೆ. ಶನಿವಾರ ಕರೂರಿನಲ್ಲಿ ನಡೆದ ರ‍್ಯಾಲಿಯಲ್ಲಿ ಕಾಲ್ತುಳಿತ ಸಂಭವಿಸಿ 39 ಜನರು ಮೃತಪಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News