×
Ad

ಪ್ರಯಾಣಿಕರ ಅಶಿಸ್ತಿನ ವರ್ತನೆ ಸ್ವೀಕಾರಾರ್ಹವಲ್ಲ ; ಜ್ಯೋತಿರಾದಿತ್ಯ ಸಿಂಧಿಯಾ

Update: 2024-01-15 22:30 IST

ಜ್ಯೋತಿರಾದಿತ್ಯ ಸಿಂದಿಯಾ | Photo: PTI 

ಹೊಸದಿಲ್ಲಿ: ದಟ್ಟಮಂಜಿನಿಂದಾಗಿ ದಿಲ್ಲಿಯ ವಿಮಾನ ನಿಲ್ದಾಣದಲ್ಲಿ ಗೋಚರತೆ ಕಡಿಮೆಯಾಗಿರುವುದು ವಿಮಾನಯಾನಗಳ ನಿರ್ವಹಣೆಗೆ ಅಡ್ಡಿಯನ್ನುಂಟು ಮಾಡಿದೆ. ಮಂಜು ಸಂಬಂಧಿತ ಪರಿಣಾಮಗಳನ್ನು ಮತ್ತು ಪ್ರಯಾಣಿಕರ ಅನಾನುಕೂಲತೆಗಳನ್ನು ತಗ್ಗಿಸಲು ಸಂಬಂಧಿಸಿದ ಎಲ್ಲರೂ ದಿನದ 24ಗಂಟೆಯೂ ಶ್ರಮಿಸುತ್ತಿದ್ದಾರೆ ಎಂದು ಸೋಮವಾರ ಇಲ್ಲಿ ತಿಳಿಸಿದ ಕೇಂದ್ರ ನಾಗರಿಕ ವಾಯುಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಪ್ರಯಾಣಿಕರ ಅಶಸ್ತಿನ ವರ್ತನೆ ಸ್ವೀಕಾರಾರ್ಹವಲ್ಲ ಎಂದು ಒತ್ತಿ ಹೇಳಿದರು.

ರವಿವಾರ ದಿಲ್ಲಿ ವಿಮಾನ ನಿಲ್ದಾಣದಲ್ಲಿ ಗೋವಾಕ್ಕೆ ತೆರಳಲಿದ್ದ ಇಂಡಿಗೋ ವಿಮಾನದ ನಿರ್ಗಮನದಲ್ಲಿ ವಿಳಂಬದಿಂದಾಗಿ ಆಕ್ರೋಶಗೊಂಡಿದ್ದ ಪ್ರಯಾಣಿಕನೋರ್ವ ಸಹಪೈಲಟ್ ಮೇಲೆ ಹಲ್ಲೆ ನಡೆಸಿದ್ದ ಹಿನ್ನೆಲೆಯಲ್ಲಿ ಸಿಂದಿಯಾರ ಈ ಹೇಳಿಕೆ ಹೊರಬಿದ್ದಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News