×
Ad

ಪ್ರಧಾನಿ, ಸಚಿವರ ಪ್ರಮಾಣವಚನ ಸ್ವೀಕಾರ ಸಮಾರಂಭದ ವೇಳೆ ರಾಷ್ಟ್ರಪತಿ ಭವನದಲ್ಲಿ ನಿಗೂಢ ಪ್ರಾಣಿ?

Update: 2024-06-10 16:50 IST

Screengrab: X/@Indian_Analyzer

ಹೊಸದಿಲ್ಲಿ: ರವಿವಾರ ರಾಷ್ಟ್ರಪತಿ ಭವನದಲ್ಲಿ ಭವ್ಯ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಚಿವ ಸಂಪುಟದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ವೇಳೆ ನಿಗೂಢ ಪ್ರಾಣಿಯೊಂದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು ಅದೀಗ ವೈರಲ್‌ ಆಗಿದೆ.

ಬಿಜೆಪಿ ಸಂಸದ ದುರ್ಗಾದಾಸ್‌ ಉಯ್ಕೆ ಅವರು ಪ್ರಮಾಣವಚನ ಸ್ವೀಕರಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಅಭಿನಂದಿಸುತ್ತಿರುವಾಗ ಹಿನ್ನೆಲೆಯಲ್ಲಿ ಬೆಕ್ಕಿನ ಆಕಾರದ ದೊಡ್ಡ ಪ್ರಾಣಿ ಹಾದು ಹೋಗುವುದು ಕಾಣಿಸಿದೆ.

ಇದು ಚಿರತೆಯೇ, ಸಾಮಾನ್ಯ ಬೆಕ್ಕೆ, ಅಥವಾ ನಾಯಿಯೇ? ಹೀಗೆ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹರಡಿವೆ.

ಇದು ತಿರುಚಲ್ಪಟ್ಟ ವೀಡಿಯೋ ಹೌದೇ ಎಂದು ಕೆಲವರು ಪ್ರಶ್ನಿಸಿದರೆ, ಅತ್ಯುನ್ನತ ಭದ್ರತೆ ಇರುವ ರಾಷ್ಟ್ರಪತಿ ಭವನದಲ್ಲಿ ಇದು ಹೇಗೆ ಯಾರ ಗಮನಕ್ಕೂ ಬಂದಿಲ್ಲ ಎಂದು ಕೆಲವರು ಕೇಳಿದ್ದಾರೆ.

ಈ ವೀಡಿಯೋ ಕುರಿತಂತೆ ರಾಷ್ಟ್ರಪತಿ ಭವನದಲ್ಲಿ ವಿಚಾರಿಸಿದ್ದಾಗಿ ಎನ್‌ಡಿಟಿವಿ ಸುದ್ದಿ ವಾಹಿನಿ ಹೇಳಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ನಿರೀಕ್ಷಿಸಲಾಗುತ್ತಿದೆ ಎಂದೂ ಸುದ್ದಿ ಸಂಸ್ಥೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News