×
Ad

ಉತ್ತರಾಖಂಡ ಸುರಂಗ ಕುಸಿತಕ್ಕೆ ಕಾರಣವೇನು?; ಇಲ್ಲಿದೆ ಮಾಹಿತಿ

Update: 2023-11-28 18:13 IST

Photo: PTI

ಹೊಸದಿಲ್ಲಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿರುವ ಸಿಲ್ಕ್ಯಾರ ಸುರಂಗ ಕುಸಿದ ಬರೋಬ್ಬರಿ 17 ದಿನಗಳ ಬಳಿಕ ಅದರಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಯ ಅಂತಿಮ ಹಂತಕ್ಕೆ ತಲುಪಿದ್ದು ಕಾರ್ಮಿಕರನ್ನು ಯಾವುದೇ ಕ್ಷಣದಲ್ಲಿ ರಕ್ಷಿಸುವ ಸಾಧ್ಯತೆಯಿದೆ.

ಅಷ್ಟಕ್ಕೂ ಈ ಸುರಂಗ ಕುಸಿತವಾಗಲು ಕಾರಣವೇನು?

ಈ 4.5 ಕಿಮೀ ಉದ್ದದ ಸುರಂಗವು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಚಾರ್‌ ಧಾಮ್‌ ಯೋಜನೆಯ ಭಾಗವಾಗಿದ್ದು ಪ್ರಮುಖ ಹಿಂದು ದೇಗುಲಗಳಾದ ಬದರೀನಾಥ, ಕೇದಾರನಾಥ, ಗಂಗೋತ್ರಿ ಮತ್ತು ಯಮುನೋತ್ರಿ ನಡುವೆ ಸಂಕಲ್ಪ ಕಲ್ಪಿಸುವ ಉದ್ದೇಶವನ್ನು ಹೊಂದಿದೆ. ಇದು ದ್ವಿಪಥ ಸುರಂಗವಾಗಿದ್ದು ಚಾರ್‌ ಧಾಮ್‌ ಯೋಜನೆಯಡಿಯಲ್ಲಿ ಅತ್ಯಂತ ಉದ್ದದ ಸುರಂಗವಾಗಿದೆ.

ನವೆಂಬರ್‌ 12ರಂದು ಸುರಂಗದ 205 ಮತ್ತು 260 ಮೀಟರ್‌ ನಡುವೆ ಕುಸಿತವಾಗಿತ್ತು. 260 ಮೀಟರಿನಾಚೆಯಿದ್ದ ಕಾರ್ಮಿಕರ ಪ್ರವೇಶ ಬಂದ್‌ ಆದ ಕಾರಣ ಅವರು ಅಲ್ಲಿಯೇ ಸಿಲುಕಿದ್ದಾರೆ. ಈ ಭಾಗದಲ್ಲಿ ವಿದ್ಯುತ್‌ ಹಾಗೂ ನೀರು ಸರಬರಾಜು ಇರುವುದರಿಂದ ಕಾರ್ಮಿಕರು ಸುರಕ್ಷಿತವಾಗಿದ್ದಾರೆ.

ಸುರಂಗ ನಿರ್ಮಿಸುವ ತಂಡಗಳು ಅಲ್ಲಿ ನಡೆಸಿದ ಸ್ಫೋಟದಿಂದಾಗಿ ಸುರಂಗ ಕುಸಿಯಿತು ಎಂದು ಹೇಳಲಾಗುತ್ತಿದೆ. “ಇದನ್ನು ಸಂಬಂಧಿತರು ಒಪ್ಪದೇ ಇದ್ದರೂ ದೊಡ್ಡ ಸ್ಫೋಟವೊಂದು ಈ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರೊಬ್ಬರು ಪ್ರತಿಕ್ರಿಯಿಸಿದ್ದಾರೆ. ಈ ಸುರಂಗ ನಿರ್ಮಾಣದ ಭಾಗವಾಗಿ ಒಂದು ಎಸ್ಕೇಪ್‌ ಸುರಂಗ ನಿರ್ಮಿಸುವ ಉದ್ದೇಶವಿತ್ತದರೂ ಅದನ್ನು ನಿರ್ಮಿಸಲಾಗಿಲ್ಲ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News