×
Ad

ನಟ ಸಲ್ಮಾನ್ ಖಾನ್‌ಗೆ ಬೆದರಿಕೆ ಆರೋಪ : ಮುಂಬೈ ಪೊಲೀಸರಿಂದ‌ ಮಾನ್ವಿಯ ಯುವಕ ಬಂಧನ

Update: 2024-11-13 14:38 IST

ಸಲ್ಮಾನ್‌ ಖಾನ್‌ | PC:PTI

ರಾಯಚೂರು : ನಟ ಸಲ್ಮಾನ್ ಖಾನ್ ಹಾಗೂ ಸಿನಿಮಾದ ಗೀತೆ ರಚನೆಕಾರರೊಬ್ಬರಿಗೆ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ ಹೆಸರಿನಲ್ಲಿ ಬೆದರಿಕೆ ಹಾಕಿದ ಆರೋಪದ ಮೇಲೆ ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸುಹೈಲ್ ಪಾಷಾ (23) ಎಂಬ ಯುವಕನನ್ನು ಮುಂಬೈ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಮಾನ್ವಿಯ ವಾರ್ಡ್ ನ.5ರ ನಿವಾಸಿ, ಸುಹೈಲ್ ಪಾಷಾ ನ.7ರಂದು ಮುಂಬೈ ನಗರದ ಪೊಲೀಸರ ವಾಟ್ಸಾಪ್‌ ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ, ʼನನಗೆ 5 ಕೋಟಿ ರೂ. ನೀಡದಿದ್ದರೆ, ಸಲ್ಮಾನ್ ಖಾನ್ ಮತ್ತು ʼಮೈ ಸಿಕಂದರ್ ಹೂಂʼ ಗೀತೆಯ ರಚನೆಕಾರನನ್ನು ಕೊಲ್ಲುತ್ತೇನೆʼ   ಎಂದು ಬೆದರಿಕೆ ಹಾಕಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಬೆದರಿಕೆ ಕರೆಯ ಹಿನ್ನೆಲೆಯಲ್ಲಿ ಪೋನ್ ಸಂಖ್ಯೆಯ ಮಾಹಿತಿಯೊಂದಿಗೆ ಕ್ರೈಂ ಬ್ರಾಂಚ್ ಪೊಲೀಸರು ಮಾನ್ವಿ ಪಟ್ಟಣಕ್ಕೆ ಆಗಮಿಸಿ ಮೊಬೈಲ್ ನಂಬರ್ ಪರಿಶೀಲಿಸಿದ್ದಾರೆ.

ಬಂಧಿತ ಯುವಕನನ್ನು ಮುಂಬೈಗೆ ಕರೆದೊಯ್ದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News