×
Ad

ರಾಯಚೂರು | ಮುಕುಂದಾ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಸೂಕ್ತ ಸ್ಥಳ, ರಸ್ತೆ ಸಂಪರ್ಕ ಕಲ್ಪಿಸುವಂತೆ ಜಿಲ್ಲಾಧಿಕಾರಿಗೆ ದಲಿತ ಸೇನೆ ಮನವಿ

Update: 2025-08-08 18:38 IST

ರಾಯಚೂರು: ಜಿಲ್ಲೆಯ ಸಿಂಧನೂರು ತಾಲೂಕಿನ ಮುಕುಂದಾ ಗ್ರಾಮದಲ್ಲಿ ಕಳೆದ 15 ವರ್ಷಗಳಿಂದ ಶವಸಂಸ್ಕಾರಕ್ಕೆ ಸಮಸ್ಯೆಯಾಗಿದ್ದು, ಕೂಡಲೇ ಸಮಸ್ಯೆ ಬಗೆಹರಿಸಬೇಕು ಎಂದು  ದಲಿತ ಸೇನೆಯ ಮುಖಂಡರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.  

ಮುಕುಂದಾ ಗ್ರಾಮದಲ್ಲಿ ಶವ ಸಂಸ್ಕಾರಕ್ಕೆ ಸಮಸ್ಯೆಯಾಗಿದ್ದು ನಿಗದಿಯಾಗಿರುವ ಸ್ಥಳ ಕೇವಲ ದಾಖಲೆಗಳಿಗೆ ಮಾತ್ರ ಸೀಮಿತವಾಗಿದೆ. ಗ್ರಾಮಸ್ಥರು ತುಂಗಭದ್ರಾ ನದಿಯನ್ನು ದಾಟಿ ಶವಸಂಸ್ಕಾರ ಮಾಡುವ ದಾರುಣ ಪರಿಸ್ಥಿತಿಯಿದೆ. ಗ್ರಾಮಕ್ಕೆ ಶವಸಂಸ್ಕಾರಕ್ಕೆ ಸೂಕ್ತ ಸ್ಥಳ, ರಸ್ತೆ ಸಂಪರ್ಕ, ಹಾಗೂ ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂಬ ಬೇಡಿಕೆ ವರ್ಷಗಳಿಂದ ಇದೆ. ಆದ್ದರಿಂದ ಕಾನೂನು ಬದ್ಧವಾಗಿ ಕ್ರಮ ಕೈಗೊಂಡು ಗ್ರಾಮಸ್ಥರಿಗೆ ಮಾನವೀಯ ಸೌಲಭ್ಯ ಒದಗಿಸಬೇಕು ಎಂದು ದಲಿತ ಸೇನೆಯ ಮುಖಂಡರು ಆಗ್ರಹಿಸಿದ್ದಾರೆ. 

ಮುಕುಂದಾ ಗ್ರಾಮದಲ್ಲಿ ಶವಸಂಸ್ಕಾರಕ್ಕೆ ಜಾಗವನ್ನು ಮೀಸಲಿರಿಸಬೇಕು. ಶವಸಂಸ್ಕಾರ ಸ್ಥಳಕ್ಕೆ ರಸ್ತೆ ಸಂಪರ್ಕ, ಶೆಡ್, ನೀರಿನ ವ್ಯವಸ್ಥೆ ಸೇರಿದಂತೆ ಮೂಲಸೌಕರ್ಯ ಒದಗಿಸಬೇಕು. ನದಿಯಲ್ಲಿ ಪ್ರವಾಹದ ಸಂದರ್ಭದಲ್ಲಿ ಮೃತದೇಹ ಸಾಗಾಟಕ್ಕೆ ತಾತ್ಕಾಲಿಕ ಬೋಟು ಪರವಾನಗಿ ನೀಡಬೇಕು ಅಥವಾ ಸೇತುವೆ ನಿರ್ಮಾಣದ ಪ್ರಸ್ತಾವನೆ ಪರಿಗಣಿಸಬೇಕು ಎಂದು ಮನವಿ ಮಾಡಿದ್ದಾರೆ.

ಈ ವೇಳೆ ಸುರೇಶ್ ಬಾಬು, ಬಾಬಾಬಾವುದ್ದೀನ್, ಕೃಷ್ಣಮಾಚಾರ್ಯಲ್ಲಾ, ಬಾಬುರಾವ್, ತಾಜುದ್ದೀನ್ , ರಾಜಸಾಬ್ , ಶಾಂತಕುಮಾರ್ ಕುರುಡಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News