×
Ad

ದೇವದುರ್ಗ | ಸೆ.7 ರಂದು 4 ನೇ ವರ್ಷದ ಸಮಾಜಮುಖಿ ಶಿಕ್ಷಕರ ಪ್ರಶಸ್ತಿ ಪ್ರಧಾನ, ಶಿಕ್ಷಕರ ದಿನಾಚರಣೆ

Update: 2025-09-04 15:03 IST

ದೇವದುರ್ಗ | ತಾಲೂಕಿನ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವವರ ಸೇವೆಯನ್ನು ಪರಿಗಣಿಸಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನು ನಡೆಯಲಾಗುತ್ತದೆ ಎಂದು ವಿನೋದ್ ನಾಯಕ್ ಹೀರೆಬೂದುರು ಪತ್ರಿಕಾಗೊಷ್ಠಿಯ ಮೂಲಕ ತಿಳಿಸಿದರು.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತಾಡಿದ ಅವರು, ಸಹಾಯಕ ಪ್ರಾಧ್ಯಾಪಕರಾದ ಡಾ.ಮಾರುತಿ ಕುಮಾರ್ ಮಲದಕ್ ರವರ ನಾಯಕತ್ವದ ಮಲದಕಲ್ ಗೆಳೆಯರ ಬಳಗ ಮತ್ತು ಜ್ನಾನವೃಕ್ಷ ಶಿಕ್ಷಣ ಮತ್ತು ಸಾಮಾಜಿಕ ಸೇವಾ ಟ್ರಸ್ಟ್‌ ದೇವದುರ್ಗ ವತಿಯಿಂದ ಸಮ ಸಮಾಜದ ನಿರ್ಮಾಣದಲ್ಲಿ ತೊಡಗಿಸಿಗೊಂಡಿರುವ ಜೊತೆಗೆ ಅವಿಭಜಿತ ದೇವದುರ್ಗ ತಾಲೂಕಿನ ಶೈಕ್ಷಣಿಕ ಅಭಿವೃದ್ಧಿಗೆ ಶಿಕ್ಷಕರು ನೀಡಿದ ಕೊಡುಗೆಯನ್ನು ಮತ್ತು ಶೈಕ್ಷಣಿಕ ಸೇವೆಯನ್ನು ಪರಿಗಣಿಸಿ ಕಳೆದ ಮೂರು ವರ್ಷಗಳಿಂದ ಸಮಾಜಮುಖಿ ಶಿಕ್ಷಕರ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಗುತ್ತಿದ್ದು, ಅದರ ಭಾಗವಾಗಿ 2025-26 ನೇ ಶೈಕ್ಷಣಿಕ ಸಾಲಿನ ಈ ಪ್ರತಿಷ್ಠಿತ ಸಮಾಜಮುಖಿ ಶಿಕ್ಷಕರ ಪ್ರಶಸ್ತಿ ಪ್ರಧಾನ ಸಮಾರಂಭ ಮತ್ತು ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಸೆ.7 ರ ಭಾನುವಾರದಂದು ದೇವದುರ್ಗ ತಾಲೂಕಿನ ಮಾನಸಗಲ್ ಗ್ರಾಮದಲ್ಲಿರುವ ಶ್ರೀ ಲಕ್ಷ್ಮೀ ರಂಗನಾಥ್ ದೇವಸ್ಥಾನ ಕಲ್ಯಾಣ ಮಂಟಪದಲ್ಕಿ ಹಮ್ಮಿಕೊಳ್ಳಲಾಗಿದೆ ಎಂದರು.

ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀ ಲಕ್ಷ್ಮೀ ರಂಗನಾಥ್ ದೇವಸ್ಥಾನದ ಅರ್ಚಕರು, ಶ್ರೀ ನಿಜಲಿಂಗಪ್ಪ ಮಹಾ ಸ್ವಾಮಿಜೀಗಳು, ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನ ಗುಂಡಗುರ್ತಿ ಹಾಗೂ ಮಲದಕಲ್ ಗ್ರಾಮದ ಶ್ರೀ ನಿಜಾನಂದ ಯೋಗಾಶ್ರಮದ  ಗುರು ಬಸವ ರಾಜ ಗುರುಗಳು ವಹಿಸಿಕೊಳ್ಳುತ್ತಿದ್ದಾರೆ. ಜೊತೆಗೆ ಈ ಕಾರ್ಯಕ್ರಮದಲ್ಲಿ ಗಣ್ಯರು, ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗನಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ನಾಗರಾಜ ಪೂಜಾರಿ ಮಾನಸಗಲ್, ಪ್ರಭು ಕಾಟಮಳ್ಳಿ, ಬುಕ್ಕಯ್ಯ ನಾಯಕ್ ಗಲಗ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News