×
Ad

ದೇವದುರ್ಗ | ಕಲ್ಮಲಾ-ತಿಂಥಣಿ ಟೋಲ್ ಗೇಟ್‌ಗಳ ತೆರವಿಗೆ ಆಗ್ರಹಿಸಿ ಪ್ರತಿಭಟನೆ

Update: 2025-06-16 17:24 IST

ದೇವದುರ್ಗ : ತಾಲೂಕಿನ ಸಮೀಪದ ಜಾಲಹಳ್ಳಿ ಗ್ರಾಮದ ಅಂಬೇಡ್ಕರ್ ಸರ್ಕಲ್ ಬಳಿ ಟೋಲ್ ಗೇಟ್ ವಿರೋಧಿ ಸಮಿತಿ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟ ನೇತೃತ್ವದಲ್ಲಿ ಕಲ್ಮಲಾ-ತಿಂಥಣಿ ಬ್ರಿಜ್-ರಾಜ್ಯ ಹೆದ್ದಾರಿಯ ಮಧ್ಯೆ ಇರುವ ಟೋಲ್ ಗೇಟ್‌ಗಳನ್ನು ತೆರವು ಮಾಡುವಂತೆ ಆಗ್ರಹಿಸಿ ಸೋಮವಾರ ಪ್ರತಿಭಟನೆ ನಡೆಯಿತು.

ಪ್ರವಾಸಿ ಮಂದಿರದಿಂದ ರ್‍ಯಾಲಿ ನಡೆಸಿ ಬಸವೇಶ್ವರ ಸರ್ಕಲ್ ಮೂಲಕ ಅಂಬೇಡ್ಕರ್ ಸರ್ಕಲ್ ಬಳಿ ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದರು.

ತಾಲೂಕಿನಲ್ಲಿ ಎರಡು ಕಡೆ ಜಾಲಹಳ್ಳಿ ಮತ್ತು ಕಾಕರಗಲ್ ಹತ್ತಿರ ಅವೈಜ್ಞಾನಿಕವಾಗಿ ಟೋಲ್ ಗೇಟ್ ನಿರ್ಮಿಸಿರುವುದು ಬಡವರ ಜೇಬಿಗೆ ಕತ್ತರಿ ಹಾಕಲು ಸರ್ಕಾರ ಮುಂದಾಗಿದ್ದು ಸರಿ ಅಲ್ಲ. ಕೂಡಲೇ ಟೋಲ್ ಗೇಟ್‌ಗನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿದರು.

ತಾಲೂಕಿನಲ್ಲಿ ಬಡ ರೈತರು ಬೆಳೆದ ಬೆಳೆಗೆ ನಿರೀಕ್ಷಿತ ಬೆಲೆ ಸಿಗುತ್ತಿಲ್ಲ. ರೈತರಿಗೆ ಹಾಗೂ ಕೃಷಿ ಕೂಲಿಕಾರರ ಕುಟುಂಬಗಳಿಗೆ ಟೋಲ್ ಗೇಟ್ ಕರವಸೂಲಿ ಹೊರೆಯಾಗುತ್ತಿದ್ದು, ಟೋಲ್ ಗೇಟ್‌ ಗೆ ಹಣ ಪಾವತಿಸುವ ವಾಹನ ಮಾಲಕರು ಹಾಗೂ ಸರ್ಕಾರಿ ಬಸ್‌ಗಳಲ್ಲಿ ತೆರಿಗೆಯ ಹೊರೆಯನ್ನು ಪ್ರಯಾಣಿಕರಿಗೆ, ಬಡವರ  ಮೇಲೆ ಹಾಕಲಾಗುತ್ತದೆ. ಇದರಿಂದ ಸಾರ್ವಜನರಿಕರ ಮೇಲೆ ಆರ್ಥಿಕ ಹೊರೆ ಬಿಳುತ್ತದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ತಕ್ಷಣವೇ ಟೋಲ್ ಗೇಟ್‌ಗಳನ್ನು ರದ್ದುಪಡಿಸಬೇಕು ಒಂದು ವೇಳೆ ಸರಕಾರ ಗಮನ ಹರಿಸದಿದ್ದರೆ ಇನ್ನಷ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು  ಎಚ್ಚರಿಸಿದರು.

ಈ ಸಂದರ್ಭದಲ್ಲಿ ಟೋಲ್ ಗೇಟ್ ವಿರೋಧಿ ಸಮಿತಿ ಗೌರವಾಧ್ಯಕ್ಷ ರಂಗಣ್ಣ ಕೋಲ್ಕರ್, ಅಧ್ಯಕ್ಷ ನರಸಣ್ಣ ನಾಯಕ, ಕಾರ್ಯದರ್ಶಿ ಮಹಾಲಿಂಗ ದೊಡ್ಡಮನಿ, ಸಾಬಣ್ಣ ಕಮಲದಿನ್ನಿ, ಶಿವನಗೌಡ ನಾಯಕ ವಂದಲಿ, ಕರವೇ ಅಧ್ಯಕ್ಷ ನಂದಪ್ಪ ಪಿ ಮಡ್ಡಿ, ದಲಿತ ಮುಖಂಡ ಮೌನೇಶ್ ಗಾಣದಾಳ, ರಮೇಶ್ ಬಾವಿಮನಿ. ಶಬ್ಬೀರ್ ಜಾಲಹಳ್ಳಿ, ಖುರ್ಷಿದ್ ಪಾಟೀಲ್, ಹೈದರ್, ಹನುಮಂತ ಮನ್ನಪೂರಿ, ವೆಂಕಟೇಶ್ ಚಲವಾದಿ, ಮಂಜು, ವೆಂಕನಗೌಡ ವಕೀಲರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News