×
Ad

ಸಾಹಿತ್ಯದ ಮೂಲಕ ಕೆಳಸ್ತರದ ಜನರ ವಾಸ್ತವಾಂಶವನ್ನು ಜಗತ್ತಿಗೆ ಪರಿಚಯಿಸಿದ್ದೇನೆ : ಬಾನು ಮುಷ್ತಾಕ್

Update: 2025-08-09 19:29 IST

ರಾಯಚೂರು: ನಾನು ಸಾಹಿತ್ಯದ ಮೂಲಕ ತಳಸ್ತರ ಸಮುದಾಯಗಳ ಜನರ ವಾಸ್ತವಿಕ ಅಂಶಗಳನ್ನು ಸಣ್ಣ ಕಥಾ ಸಂಕಲನ ಮೂಲಕ ಪ್ರಕಟಿಸಿ ಜಗತ್ತಿಗೆ ಪರಿಚಯಿಸಿದ್ದೇನೆ. ದಕ್ಷಿಣ ಭಾರತದ ದ್ರಾವಿಡ ಭಾಷೆಗೆ ಭೂಕರ್ ಪ್ರಶಸ್ತಿ ಸಿಕ್ಕಿರುವುದು ಮತ್ತು ಮಹಿಳೆಯಾಗಿ ಪ್ರಶಸ್ತಿ ಪಡೆದಿರುವುದು ತೃಪ್ತಿ ನೀಡಿದೆ ಎಂದು ಬೂಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನು ಮುಷ್ತಾಕ್ ಹೇಳಿದರು.

ದೇವದುರ್ಗ ತಾಲೂಕಿನ ಗಬ್ಬೂರು ಮಹಾಶೈವ ಧರ್ಮ ಪೀಠದ ವತಿಯಿಂದ ಶ್ರೀ ಕುಮಾರಸ್ವಾಮಿ 116 ನೇ ಹುಟ್ಟುಹಬ್ಬದ ನಿಮಿತ್ಯ ಹಮ್ಮಿಕೊಂಡಿದ್ದ ಮಹಾಶಿವ ಗುರುಪೂರ್ಣಿಮೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ಶನಿವಾರ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಭ್ರಷ್ಟಾಚಾರದಿಂದ ಕಲುಷಿತಗೊಂಡ ವ್ಯವಸ್ಥೆಯ ಛಾಯೆಯೂ ಸಾಹಿತಿಗಳ ಮೇಲೆಯೂ ಪರಿಣಾಮ ಬೀರಿದೆ. ಕೆಎಎಸ್ ಹುದ್ದೆಗೆ ಆಯ್ಕೆಯಾದ ನನ್ನ ಮಗಳು ವ್ಯವಸ್ತೆಗೆ ಹೊಂದಿಕೊಳ್ಳಲಾಗದೆ ರಾಜೀನಾಮೆ ನೀಡಿ, ಬಾಂಬೆ ಹೈಕೋರ್ಟಲ್ಲಿ ವಕೀಲ ವೃತ್ತಿ ಆರಂಭಿಸಿದ್ದಾಳೆ. ಅಧಿಕಾರದ ವ್ಯಾಮೋಹಕ್ಕೆ ಒಳಪಟ್ಟು ಭ್ರಷ್ಟಾಚಾರ ಮಾಡುವ ಅಧಿಕಾರಿಗಳ ಮಧ್ಯೆ ಮುಕ್ಕಣ ಕರಿಗಾರ ಅವರ ಧರ್ಮಪೀಠ ಜನಪರ ಕಾಳಜಿ ವಹಿಸಿ ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ನಾಡಿನ ಖ್ಯಾತ ಸಾಹಿತಿ ಹಾಗೂ ಬೂಕರ್ ಪ್ರಶಸ್ತಿ ವಿಜೇತರಾದ ಸಾಹಿತಿ ಬಾನು ಮುಷ್ತಾಕ್ ಅವರಿಗೆ ಮಹಾತಪಸ್ವಿ ಶ್ರೀ ಕುಮಾರಸ್ವಾಮಿ ಸಾಹಿತ್ಯ ರತ್ನ ಪ್ರಶಸ್ತಿ ಮತ್ತು ಬೀದರ್‌ ಜಿಲ್ಲಾ ಪ್ರಜಾವಾಣಿ ವರದಿಗಾರ ಶಶಿಕಾಂತ ಶೆಂಬೆಳ್ಳಿಯವರಿಗೆ ಮಹಾ ತಪಸ್ವಿ ಶ್ರೀ ಕುಮಾರಸ್ವಾಮಿ ಪತ್ರಿಕಾ ಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಹಿರಿಯ ಪತ್ರಕರ್ತ ಶಶಿಕಾಂತ ಶೆಂಬೆಳ್ಳಿ ಮಾತನಾಡಿದರು.

ಮಹಾಶೈವ ಧರ್ಮ ಪೀಠದ ಅಧ್ಯಕ್ಷ ಮುಕ್ಕಣ್ಣ ಕರಿಗಾರ, ಮಾಜಿ ಶಾಸಕ ಕೆ ಶಿವನಗೌಡ ನಾಯಕ, ಸುಲ್ತಾನಪುರ ಗಂಗಾಧರ ಆಶ್ರಮ ಅಧ್ಯಕ್ಷ ಶರಣಗೌಡ, ಹಿರಿಯ ಸಾಹಿತಿ ಶಾಶ್ವತ ಸ್ವಾಮಿ ಮುಕ್ಕುಂದಿ ಮಠ, ವಿಜಯಪುರ ಮೆಡಿಕಲ್ ಕಾಲೇಜ ಸಹಾಯಕ ಪ್ರಾಧ್ಯಾಪಕ ವಿಶಾಲ್ ಎಸ್ ನಿಂಬಾಳ, ಖಾಜಯ್ಯಗೌಡ, ಹಿರಿಯ ಪತ್ರಕರ್ತ ಬಸವರಾಜ ಭೋಗವತಿ, ಬಸವರಾಜ ಸಿನ್ನೂರ, ಎನ್ ಹೆಚ್ ಪೂಜಾರ, ಗಂಗಾಧರ ಮೂರ್ತಿ, ಷಣ್ಮುಖ ಹೂಗಾರ, ಬಸವಲಿಂಗ ಕರಿಗಾರ ಬಸವರಾಜ ಕರಿಗಾರ ಮತ್ತು ಮಹಾಶೈವ ಧರ್ಮ ಪೀಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News