ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸಗಳು ಸಮಾಜದಲ್ಲಿ ನಡೆಯುತ್ತಿದೆ : ಮುಹಮ್ಮದ್ ಕುಂಞ
Update: 2025-05-03 23:33 IST
ರಾಯಚೂರು : ಮಾನವ ಕುಲಕ್ಕೆ ಒಬ್ಬನೇ ದೇವರು. ಧರ್ಮದ ಹೆಸರಿನಲ್ಲಿ ಅಧರ್ಮದ ಕೆಲಸಗಳು ಸಮಾಜದಲ್ಲಿ ನಡಯುತ್ತಿದೆ. ಎಲ್ಲಾ ಧರ್ಮಗಳು ಆರೋಗ್ಯ ಪೂರಕ ಸಮಾಜ ಕಟ್ಟಲು ನಿಜವಾದ ಸಂದೇಶಗಳನ್ನು ಸಾರಿವೆ ಎಂದು ಜಮಾಅತ್ ಇಸ್ಲಾಂ ಹಿಂದ್ ಮುಖಂಡ ಮುಹಮ್ಮದ್ ಕುಂಞಿ ಹೇಳಿದರು.
ಜಿಲ್ಲೆ ಸಿಂಧನೂರು ನಗರದ ಆರ್‌ಜಿಎಂ ಶಾಲಾ ಮೈದಾನದಲ್ಲಿ ಮೂರು ದಿನದ ಸಾರ್ವಜನಿಕ ಕುರ್‌ಆನ್ ಪ್ರವಚನ ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಮಾತನಾಡಿದರು.
ಶ್ರೀ ಮಾದಯ್ಯ ಅಮೋಘಸಿದ್ದೇಶ್ವರ ಮಠ ತುರುವಿಹಾಳ ಮಾತನಾಡಿದರು.
ಈ ವೇಳೆ ಸಿದ್ದಲಿಂಗ ಮಹಾಸ್ವಾಮಿ, ಸೋಮನಾಥ ಶಿವಾಚಾರ್ಯ, ಸಿದ್ದರಾಮಯ್ಯರು ರುದ್ರಮುನಿ ಶಿವಾಚಾರ್ಯ, ಶಿವಯೋಗಿ ಶಿವಾಚಾರ್ಯ, ಆತ್ಮನಂದ ಮಹಾಸ್ವಾಮಿ, ಮಹಾಲಿಂಗ ಮಹಾಸ್ವಾಮಿ, ವೀರಭದ್ರ ಮಹಾಸ್ವಾಮಿ, ಅಮರಗುಂಡ ಶಿವಾಚಾರ್ಯ,ಇನ್ನಿತರರು ಹಾಜರಿದ್ದರು.