×
Ad

ರಾಯಚೂರು: ಅ. 18ರಂದು ಎಲ್‌ವಿಡಿ ಕಾಲೇಜಿನಲ್ಲಿ ಉದ್ಯೋಗ ಮೇಳ

Update: 2025-10-16 20:11 IST

ರಾಯಚೂರು: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಿಂದ ನಗರದ ಎಲ್‌ವಿಡಿ ಕಾಲೇಜಿನಲ್ಲಿ ಅಕ್ಟೋಬರ್ 18ರ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 02 ಗಂಟೆವರೆಗೆ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ. ಈ ಮೇಳದಲ್ಲಿ ಸುಮಾರು 15 ವಿವಿಧ ಕಂಪನಿಗಳು ಭಾಗವಹಿಸಿ ತಮ್ಮಲ್ಲಿ ಖಾಲಿ ಇರುವ ಹುದ್ದೆಗಳನ್ನು ನೇರವಾಗಿ ಭರ್ತಿ ಮಾಡಿಕೊಳ್ಳಲಿದ್ದಾರೆ.

ಅರ್ಹತೆಗಳು:

ಎಸೆಸ್ಸೆಲ್ಸಿ, ಪಿ.ಯು.ಸಿ ಹಾಗೂ ಎಲ್ಲಾ ಪದವೀಧರ ಆಸಕ್ತ 18 ರಿಂದ 30 ವರ್ಷಗಳ ವರೆಗಿನ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದಾಗಿದೆ. ವಿದ್ಯಾರ್ಹತೆಯ ಅಂಕಪಟ್ಟಿಗಳ ಜೆರಾಕ್ಸ್ ಪ್ರತಿಗಳು ಮತ್ತು ತಮ್ಮ ಬಯೋಡೆಟಾ, ಆಧಾರ್ ಕಾರ್ಡ್ ಪ್ರತಿ, ಭಾವಚಿತ್ರಗನ್ನು ಸಲ್ಲಿಸಬೇಕು.

ನೇರ ಸಂದರ್ಶನದಲ್ಲಿ ಭಾಗವಹಿಸಲು ಯಾವುದೇ ಶುಲ್ಕವಿರುವುದಿಲ್ಲ, ಬದಲಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಬಾಲಾಜಿ ಕಾಂಪ್ಲೆಕ್ಸ್, ನೆಲ ಮಹಡಿ, ಗೂಡ್ ಶೆಡ್ ರಸ್ತೆ, ಸ್ಟೇಷನ್ ಏರಿಯಾ, ರಾಯಚೂರು ಹಾಗೂ ದೂರವಾಣಿ ಸಂಖ್ಯೆ 08532-231684, 8073610442ಗೆ ಇಲ್ಲಿ ಕಚೇರಿ ಸಮಯದಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿಗಳಾದ ನವೀನಕುಮಾರ್ ಸಂಗೇಪಾಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News