ಮಾನ್ವಿ | ಪೇಂಟ್ ಅಂಗಡಿಯಲ್ಲಿ ಅಗ್ನಿ ಅವಘಡ : ಅಪಾರ ನಷ್ಟ
Update: 2026-01-17 18:36 IST
ಮಾನ್ವಿ : ಪಟ್ಟಣದ ಬಸವ ವೃತ್ತದ ಹತ್ತಿರ ಇರುವ ಲಕ್ಷ್ಮೀ ವೆಂಕಟೇಶ್ವರ ಪೇಂಟ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಸಂಭವಿಸಿದ ಅಗ್ನಿ ಅನಾಹುತದಿಂದಾಗಿ ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಗಳ ಪೇಂಟ್ ಸೇರಿದಂತೆ ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು ಎಂದು ಅಂಗಡಿ ಮಾಲಕ ಬಿ.ವೀರೇಶ ಬಾಬು ರವರಿಗೆ ತಿಳಿಸಿದ್ದಾರೆ.