×
Ad

ಮೇ 7ರಂದು ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ಮಾಕ್ ಡ್ರಿಲ್: ಜಿಲ್ಲಾಧಿಕಾರಿ ನಿತೀಶ್

Update: 2025-05-06 15:16 IST

ರಾಯಚೂರು: ದೇಶಾದ್ಯಂತ ಮೇ 7ರಂದು ಮಾಕ್ ಡ್ರಿಲ್ ( ಅಣಕು ದಾಳಿ ರಕ್ಷಣಾ ಕಾರ್ಯಚರಣೆ) ನಡೆಯಲಿದ್ದು, ರಾಯಚೂರಿನ ಶಕ್ತಿನಗರದಲ್ಲೂ ಮಾಕ್ ಡ್ರಿಲ್ ನಡೆಯಲಿದೆ ಎಂದು ರಾಯಚೂರು ಜಿಲ್ಲಾಧಿಕಾರಿ ನಿತೀಶ್ ಕೆ. ತಿಳಿಸಿದ್ದಾರೆ.

ಅವರಿಂದು ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರಕಾರದಿಂದ ರಾಜ್ಯ ಸರಕಾರಗಳಿಗೆ ಮಾಕ್ ಡ್ರಿಲ್ ಮಾಡುವ ಆದೇಶ ಬಂದಿದೆ. ಯಾವ ರೀತಿ ಮಾಕ್ ಡ್ರಿಲ್ ಮಾಡಬೇಕು ಎಂಬ ಪ್ರೋಟೋಕಾಲ್ ಬರಲಿದೆ. ರಾಯಚೂರು ತಾಲೂಕಿನ ಶಕ್ತಿನಗರದಲ್ಲಿ ನಾಳೆ ಮಾಕ್ ಡ್ರಿಲ್ ಮಾಡಲು ತೀರ್ಮಾನಿಸಲಾಗಿದೆ. ಯಾವ ರೀತಿ ಹಾಗೂ ಯಾವ ಸಮಯಕ್ಕೆ ಮಾಡಬೇಕು ಎಂಬ ನಿರ್ದೇಶನ ಇಷರಲ್ಲೇ ಬರುತ್ತದೆ. ರಾಜ್ಯ ಸರ್ಕಾರದಿಂದ ನಮಗೆ ನಿರ್ದೇಶನಗಳು ಬರುತ್ತವೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರದ ಸಿವಿಲ್ ಡಿಫೆನ್ಸ್ ಹಾಗೂ ರಾಜ್ಯ ಸರ್ಕಾರ ಮತ್ತು ಪೊಲೀಸರ ಜೊತೆ ಚರ್ಚಿಸಿ ಸಮಯ ನಿಗದಿ ಮಾಡಲಾಗುವುದು. ಸ್ಥಳೀಯ ಪೊಲೀಸ್, ಅಗ್ನಿಶಾಮಕ, ಎನ್ ಸಿ ಸಿ, ಸ್ವಯಂ ಸೇವಕರು ಭಾಗವಹಿಸಲಿದ್ದಾರೆ. ಸ್ಥಳೀಯರು ಎಚ್ಚರಿಕೆಯಿಂದ ಇರಲಿ ಎಂದು ಮಾಕ್ ಡ್ರಿಲ್ ಮಾಡಲಾಗುತ್ತಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News