×
Ad

ರಾಯಚೂರು | ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ; ನಾಲ್ವರ ಬಂಧನ

Update: 2025-07-06 22:13 IST

ಸಾಂದರ್ಭಿಕ ಚಿತ್ರ

ರಾಯಚೂರು: ಸಮೀಪದ ಯರಮರಸ್ ಹೊರವಲಯದಲ್ಲಿರುವ ಮೆಘಾ ರೆಸಿಡೆನ್ಸಿ ಹೋಟೆಲ್‍ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂದೆ ಮೇಲೆ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ಆರು ಮಹಿಳೆಯರನ್ನು ರಕ್ಷಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. 

ದಂದೆಯ ಕಿಂಗ್‍ಪಿನ್ ಶಂಕರ್, ಕಾರು ಚಾಲಕ ಮಲ್ಲೇಶ ನಾಯಕ, ಹೋಟೆಲ್ ವ್ಯವಸ್ಥಾಪಕ ಶಿವಕುಮಾರ್, ರೂಮ್ ಬಾಯ್ ದುರುಗೇಶ ಎನ್ನುವವರನ್ನು ಬಂಧಿಸಲಾಗಿದೆ. 

ಪಶ್ಚಿಮ ಗೋದಾವರಿ ಭಾಗ ಹಾಗೂ ರಾಜಮಂಡ್ರಿ, ವಿಶಾಖಪಟ್ಟಣ ಭಾಗದ ಮಹಿಳೆಯರು ದಂದೆಯಲ್ಲಿ ಪಾಲ್ಗೊಂಡಿದ್ದಾರೆ. 

ವಶಕ್ಕೆ ಪಡೆದ ಮಹಿಳೆಯರನ್ನು ಮಹಿಳಾ ಸಾಂತ್ವನ ಕೇಂದ್ರಕ್ಕೆ ಕಳುಹಿಸಲಾಗಿದೆ. ಪೊಲೀಸರು ಪೆಟ್ರೊಲಿಂಗ್ ಮಾಡುವಾಗ ಕಾರು ಅನುಮಾನಾಸ್ಪದ ರೀತಿಯಲ್ಲಿ ಓಡಾಟ ನಡೆಸುತ್ತಿರುವುದನ್ನು ಪೊಲೀಸರು ಗಮನಿಸಿದ್ದಾರೆ. ತಡೆದು ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಸಿಪಿಐ ಸಾಬಯ್ಯ ನಾಯಕ ನೇತೃತ್ವದಲ್ಲಿ ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿದ್ದು, ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News