ರಾಯಚೂರು: ಬಾಣಂತಿ, ಮಗು ಮೃತ್ಯು
Update: 2025-08-26 11:07 IST
ರಾಯಚೂರು: ಹೆರಿಗೆಯ ವೇಳೆ ತೀವ್ರ ರಕ್ತಸ್ರಾವವಾಗಿ ತಾಯಿ ಮತ್ತು ಮಗು ಇಬ್ಬರೂ ಮೃತಪಟ್ಟ ಘಟನೆ ರಾಯಚೂರು ನಗರದ ಬೆಟ್ಟದೂರು ಆಸ್ಪತ್ರೆಯಲ್ಲಿ ನಡೆದಿದೆ.
ಮೃತ ಬಾಣಂತಿ ದೇವದುರ್ಗ ತಾಲೂಕು ಬಿಆರ್ ಗುಂಡ ಗ್ರಾಮದ ಶಿವಗಂಗಮ್ಮ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ವರದಿ ಪ್ರಕಾರ, ಶಿವಗಂಗಮ್ಮರಿಗೆ ಪ್ರಸವ ವೇದನೆ ಆರಂಭವಾದ ಬಳಿಕ ಸಮೀಪದ ದೇವದುರ್ಗ ಆಸ್ಪತ್ರೆಗೆ ಕರೆದೊಯ್ಯಲಾಯಿತು. ನಂತರ ರಾಯಚೂರು ಬೆಟ್ಟದೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಆದರೆ ತಕ್ಷಣ ತೀವ್ರ ರಕ್ತಸ್ರಾವ ಉಂಟಾಗಿ ಮಗುವಿನ ಜೊತೆಗೆ ತಾಯಿಯೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ದೇವದುರ್ಗ ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯದಿಂದ ಈ ಸಾವು ಸಂಭವಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.