ರಾಸಾಯನಿಕ ಗೊಬ್ಬರದ ಬೆಲೆ ಏರಿಕೆ ಖಂಡಿಸಿ ಯುವ ಕಾಂಗ್ರೆಸ್‌ದಿಂದ ವಿನೂತನ ಪ್ರತಿಭಟನೆ
ರಾಯಚೂರು:ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ, ರೈತರಿಗೆ ವಿತರಿಸಲಾಗುವ ರಾಸಾಯನಿಕ ಗೊಬ್ಬರಗಳ ಬೆಲೆ ಏರಿಕೆಯನ್ನು ಖಂಡಿಸಿ, ರಾಯಚೂರು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯ ಇಂದು ನಗರದ ಡಾ.ಬಿ.ಆರ್ ಅಂಬೇಡ್ಕರ್ ಸರ್ಕಲ್‌ನಲ್ಲಿ ಎತ್ತುಗಾಡಿ ಜಾಥಾ, ಗೊಬ್ಬರದ ಪ್ಯಾಕೇಜು ಮಾದರಿ ಪೋಸ್ಟರ್‌ಗಳು, ಪ್ರಧಾನಿ ಮತ್ತು ಗೊಬ್ಬರ ಸಚಿವರ ಪ್ರತಿಕೃತಿ ಪತಾಕೆಗಳು ಇತ್ಯಾದಿಗಳ ಮೂಲಕ ಪ್ರತಿಭಟನೆ ವೈಶಿಷ್ಟ್ಯಪೂರ್ಣವಾಗಿ ಜರುಗಿತು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮರಿಸ್ವಾಮಿ ಗಟ್ಟುಬಿಚ್ಚಾಲಿ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಗೆ, ರಾಜ್ಯ ಕಾರ್ಯದರ್ಶಿ ಫೈಸಾಲ್ಖಾನ್, ಜಿಲ್ಲಾ ಉಪಾಧ್ಯಕ್ಷರು, ಬ್ಲಾಕ್ ಅಧ್ಯಕ್ಷರು, ಯುವ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಸಾವಿರಾರು ರೈತರು ಹಾಗೂ ಕಾರ್ಯಕರ್ತರು ಭಾಗವಹಿಸಿದರು. ಪ್ರತಿಭಟನೆಯಲ್ಲಿ ಪಾಲ್ಗೊಂಡ ಯುವಕರು "ರೈತ ಹಿತದ್ರೋಹಿ ಬಿಜೆಪಿ ಸರ್ಕಾರ ವಿರುದ್ಧ ಘೋಷಣೆ"ಗಳನ್ನು ಕೂಗಿ, ರಾಸಾಯನಿಕ ಗೊಬ್ಬರದ ಬೆಲೆ ಏರಿಕೆ ಹಿಂದಿನ ಸತ್ಯವನ್ನು ಸಾರ್ವಜನಿಕರ ಮುಂದೆ ತಂದರು.
ಪ್ರತಿಭಟನೆ ಬಳಿಕ, ಕೇಂದ್ರ ಸರ್ಕಾರದ ನೀತಿಯ ವಿರುದ್ಧವಾಗಿ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿದರು. ಇತ್ತೀಚೆಗೆ ರೈತರ ಬಳಕೆಗಾಗಿ ಅವಶ್ಯಕವಾಗಿರುವ ಗೊಬ್ಬರಗಳ ಬೆಲೆಯಲ್ಲಿ ಭಾರೀ ಏರಿಕೆ ಮಾಡಲಾಗಿದೆ.15-15-15 ಗೊಬ್ಬರದ ದರ: ₹1250 ರಿಂದ 1650ಕ್ಕೆ, 10-26-26 ಗೊಬ್ಬರದ ದರ: ₹1470 ರಿಂದ ₹1800ಕ್ಕೆ, 20-20-20 ಗೊಬ್ಬರದ ದರ: ₹1020 ರಿಂದ ₹1360ಕ್ಕೆ, 12-32-16 ಗೊಬ್ಬರದ ದರ: ₹1470 ರಿಂದ ₹1775ಕ್ಕೆ, ಯೂರಿಯಾ: ₹266 ರಿಂದ ₹280ಕ್ಕೆ, ಡಿ.ಎ.ಪಿ ಗೊಬ್ಬರ: ಸ್ಥಳೀಯವಾಗಿ ಲಭ್ಯವಿಲ್ಲ.
ಈ ಬೆಲೆ ಏರಿಕೆಗಳು ರೈತರ ಆರ್ಥಿಕ ಬಡತನವನ್ನು ಮತ್ತಷ್ಟು ಹೆಚ್ಚಿಸಿವೆ. ಒಂದೆಡೆ ಕಿಸಾನ್ ಸಮ್ಮಾನ್ ಯೋಜನೆಯಡಿ ವರ್ಷಕ್ಕೆ ₹4000 ನೀಡುವ ಕೇಂದ್ರ ಸರ್ಕಾರ, ಮತ್ತೊಂದೆಡೆ ಗೊಬ್ಬರ, ಔಷಧಿ, ಬೀಜದ ದರ ಏರಿಸಿ ರೈತನ ಜೇಬಿಗೆ ಹೊಡೆತ ನೀಡುತ್ತಿದೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.
ಕೇಂದ್ರ ಗೊಬ್ಬರ ಸಚಿವ ಜೆ.ಪಿ. ನಡ್ಡಾ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಕೇಂದ್ರ ಸರ್ಕಾರ ತಕ್ಷಣವೇ ಬೆಲೆ ಇಳಿಕೆ ಮಾಡಬೇಕೆಂದು ಜಿಲ್ಲಾಧಿಕಾರಿಗಳ ಮುಖಾಂತರ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಬಿ.ಮಧುಕುಮಾರ, ಕಿಶೋರ್, ರಷೀದ್, ಮಹ್ಮದ್ ಅಜ್ಜು, ಎಂ.ಡಿ.ಜಾವಿಂದ್, ರಫಿ, ಅಬ್ದುಲ್ ಗೌಸ್, ಪ್ರತಾಪರೆಡ್ಡಿ, ಪ್ರವೀಣ್ ರೆಡ್ಡಿ ಗುದ್ದಿ, ರಾಬರ್ಟ್ ಹೊಸೂರು, ಸಿದ್ದುನಾಯಕ ಹಾಗೂ ಇತರ ಬ್ಲಾಕ್ ಯುವ ಕಾಂಗ್ರೆಸ್ ನಾಯಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ .