×
Ad

ಅಮೆರಿಕನ್ ಓಪನ್: ಸಿಂಧು, ಸೇನ್ ಶುಭಾರಂಭ, ಪ್ರಣೀತ್ ಗೆ ಸೋಲು

Update: 2023-07-13 23:13 IST

Photo: PTI

ನ್ಯೂಯಾರ್ಕ್: ಡಬಲ್ ಒಲಿಂಪಿಯನ್ ಪಿ.ವಿ. ಸಿಂಧು, ಲಕ್ಷ್ಯ ಸೇನ್ ಅಮೆರಿಕನ್ ಓಪನ್ ಸೂಪರ್-300 ಬ್ಯಾಡ್ಮಿಂಟನ್ ಟೂರ್ನಿಯ ಮೊದಲ ಪಂದ್ಯದಲ್ಲಿ ಜಯ ದಾಖಲಿಸಿ ಶುಭಾರಂಭ ಮಾಡಿದ್ದಾರೆ.

ಸಿಂಧು ಮಹಿಳೆಯರ ಸಿಂಗಲ್ಸ್ ನಲ್ಲಿ ಭಾರತ ಮೂಲದ ಅಮೆರಿಕದ ಆಟಗಾರ್ತಿ ದಿಶಾ ಗುಪ್ತಾರನ್ನು ಕೇವಲ 17 ನಿಮಿಷಗಳಲ್ಲಿ 21-15, 21-12 ನೇರ ಗೇಮ್ಗಳಿಂದ ಸುಲಭವಾಗಿ ಮಣಿಸಿ 2ನೇ ಸುತ್ತಿಗೆ ತಲುಪಿದರು.ಪುರುಷರ ಸಿಂಗಲ್ಸ್ ನ  ಮೊದಲ ಸುತ್ತಿನಲ್ಲಿ ಸೇನ್ ಫಿನ್ಲ್ಯಾಂಡ್ ನ  ಕಲ್ಲೆ ಕೊಲ್ಜೊನೆನ್ರನ್ನು 30 ನಿಮಿಷದೊಳಗೆ 21-8, 21-16 ಅಂತರದಿಂದ ಸೋಲಿಸಿದರು.

ಬಿ.ಸಾಯಿ ಪ್ರಣೀತ್ ಚೀನಾದ ವಿಶ್ವದ ನಂ.7ನೇ ಆಟಗಾರ ಲಿಶಿ ಫೆಂಗ್ಗೆ ತೀವ್ರ ಪೈಪೋಟಿಯನ್ನು ನೀಡಿದ್ದರೂ ಕೂಡ 1 ಗಂಟೆ, 14 ನಿಮಿಷಗಳ ಹೋರಾಟದಲ್ಲಿ 16-21, 21-14, 21-19 ಗೇಮ್ಗಳ ಅಂತರದಿಂದ ಸೋತಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News