×
Ad

ಹ್ಯಾಟ್ರಿಕ್ ಅವಕಾಶ ಕಳೆದುಕೊಂಡ ಪ್ರಸಿದ್ಧ್ ಕೃಷ್ಣಗೆ 2 ವಿಕೆಟ್

Update: 2023-09-24 19:49 IST

Photo: espncricinfo.com 

ಇಂದೋರ್ : ಭಾರತ ವಿರುದ್ಧ ಸರಣಿಯ 2ನೇ ಏಕದಿನ ಪಂದ್ಯದಲ್ಲಿ ಗೆಲುವಿಗೆ ಭಾರತ ನೀಡಿದ 400 ರನ್ ಗಳ ಬೆನ್ನು ಹತ್ತಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದೆ. 9 ಓವರ್ನಲ್ಲಿ 2 ವಿಕೆಟ್ ಕಳೆದುಕೊಂಡು 56 ರನ್ ಗಳಿಸಿದೆ. ಡೇವಿಡ್ ವಾರ್ನರ್, ಮಾರ್ನೂಸ್ ಲಾಬುಶೇನ್ ಕ್ರೀಸ್ನಲ್ಲಿದ್ದಾರೆ.

1.2ನೇ ಓವರ್ ನಲ್ಲಿ 9 ರನ್ ಗಳಿಸಿದ್ದಾಗ ಪ್ರಸಿದ್ಧ್ ಕೃಷ್ಣ ಅವರು 9 ರನ್ ಗಳಿಸಿದ್ದ ಮ್ಯಾಥ್ಯೂ ಶಾರ್ಟ್ ವಿಕೆಟ್ ಪಡೆದರು. ಆರ್ ಅಶ್ವಿನ್ ಗೆ ಕ್ಯಾಚ್ ನೀಡಿ ಮ್ಯಾಥ್ಯೂ ನಿರ್ಗಮಿಸಿದರು.1.3 ನೇ ಓವರ್ ನಲ್ಲಿ ಸ್ಟೀವನ್ ಸ್ಮಿತ್ ಅವರು ಶುಭಮನ್ ಗಿಲ್ ಗೆ ಕ್ಯಾಚ್ ನೀಡಿ ಶೂನ್ಯ ಸುತ್ತಿದರು.

ಈ ಸಂದರ್ಭ ಪ್ರಸಿದ್ಧ್ ಕೃಷ್ಣ ಅವರಿಗೆ ಹ್ಯಾಟ್ರಿಕ್ ಅವಕಾಶವಿತ್ತು. ಕ್ರೀಸ್ ಗೆ ಬಂದ ಮಾರ್ನೂಸ್ ಲಾಬುಶೇನ್ ಅದಕ್ಕೆ ಅವಕಾಶ ನೀಡಲಿಲ್ಲ. 1.4 ನೇ ಓವರ್ ನಲ್ಲಿ ಅವರು ಒಂದು ರನ್ ಗಳಿಸಿ ಹ್ಯಾಟ್ರಿಕ್ ಅವಕಾಶ ತಪ್ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News