×
Ad

ಟಿ20 ವಿಶ್ವಕಪ್ | 15 ಸದಸ್ಯರ ಶ್ರೀಲಂಕಾ ತಂಡ ಪ್ರಕಟ

Update: 2024-05-09 21:32 IST

Photo: ANI

ಕೊಲಂಬೊ : ಶ್ರೀಲಂಕಾ ಕ್ರಿಕೆಟ್ ಮಂಡಳಿಯು ಗುರುವಾರ 2024ರ ಟಿ20 ವಿಶ್ವಕಪ್ ಗಾಗಿ 15 ಸದಸ್ಯರ ತಂಡವನ್ನು ಪ್ರಕಟಿಸಿದೆ. ತಂಡದ ನಾಯಕನಾಗಿ ವನಿಂಡು ಹಸರಂಗರನ್ನು ನೇಮಿಸಲಾಗಿದೆ.

ವಿಶ್ವಕಪ್ ನಲ್ಲಿ ಶ್ರೀಲಂಕಾವು ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ದಕ್ಷಿಣ ಆಫ್ರಿಕ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ನೇಪಾಳ ಇವೆ. ತಂಡದಲ್ಲಿ 15 ಸದಸ್ಯರ ಜೊತೆಗೆ ಇತರ ನಾಲ್ವರು ಆಟಗಾರರನ್ನು ಮೀಸಲ ಆಟಗಾರರಾಗಿ ಹೆಸರಿಸಲಾಗಿದೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದಲ್ಲಿ ನಡೆಯುವ ಟಿ20 ವಿಶ್ವಕಪ್ ಜೂನ್ 1ರಂದು ಆರಂಭಗೊಳ್ಳಲಿದೆ.

ತಂಡ

ವನಿಂಡು ಹಸರಂಗ (ನಾಯಕ), ಚರಿತ್ ಅಸಲಂಕ (ಉಪನಾಯಕ), ಕುಸಾಲ್ ಮೆಂಡಿಸ್, ಪತುಮ್ ನಿಸ್ಸಂಕ, ಕಮಿಂಡು ಮೆಂಡಿಸ್, ಸದೀರ ಸಮರವಿಕ್ರಮ, ಆ್ಯಂಜೆಲೊ ಮ್ಯಾಥ್ಯೂಸ್, ದಸುನ್ ಶನಕ, ಧನಂಜಯ ಡಿ ಸಿಲ್ವ, ಮಹೀಶ್ ತೀಕ್ಷಣ, ದುನಿತ್ ವೆಲ್ಲಲಗೆ, ದುಶ್ಮಂತ ಚಮೀರ, ನುವಾನ್ ತುಷಾರ, ಮತೀಶ ಪತಿರಣ ಮತ್ತು ದಿಲ್ಶನ್ ಮದುಶಂಕ

ಮೀಸಲು ಆಟಗಾರರು: ಅಸಿತ ಫೆರ್ನಾಂಡೊ, ವಿಜಯಕಾಂತ್ ವಿಯಸ್ಕಾಂತ್, ಭನುಕ ರಾಜಪಕ್ಸ ಮತ್ತು ಜನಿತ್ ಲಿಯನಗೆ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News