×
Ad

2025ರ ಆವೃತ್ತಿಯ ಪುರುಷರ ಜೂನಿಯರ್ ಹಾಕಿ ವಿಶ್ವಕಪ್ | ರೋಹಿತ್ ನಾಯಕತ್ವದ ಭಾರತ ತಂಡ ಪ್ರಕಟ

Update: 2025-11-14 20:32 IST

Photo Credit : hockeyindia.org

ಹೊಸದಿಲ್ಲಿ, ನ.14: ಚೆನ್ನೈ ಹಾಗೂ ಮಧುರೈನಲ್ಲಿ ನವೆಂಬರ್ 28ರಿಂದ ಡಿಸೆಂಬರ್ 10ರ ತನಕ ನಡೆಯಲಿರುವ 2025ರ ಆವೃತ್ತಿಯ ಎಫ್‌ಐಎಚ್ ಪುರುಷರ ಜೂನಿಯರ್ ವಿಶ್ವಕಪ್ ಟೂರ್ನಿಗಾಗಿ ಹಾಕಿ ಇಂಡಿಯಾವು 18 ಸದಸ್ಯರನ್ನು ಒಳಗೊಂಡ ತಂಡವನ್ನು ಶುಕ್ರವಾರ ಪ್ರಕಟಿಸಿದೆ.

ಪಿ.ಆರ್. ಶ್ರೀಜೇಶ್ ಕೋಚಿಂಗ್‌ ನಿಂದ ಪಳಗಿರುವ ಭಾರತದ ಜೂನಿಯರ್ ಹಾಕಿ ತಂಡಕ್ಕೆ ಡಿಫೆಂಡರ್ ಹಾಗೂ ಡ್ರ್ಯಾಗ್ ಫ್ಲಿಕರ್ ರೋಹಿತ್ ನಾಯಕತ್ವವಹಿಸಿದ್ದಾರೆ. ರೋಹಿತ್ ನೇತೃತ್ವದಲ್ಲಿ ಭಾರತ ತಂಡವು ಸುಲ್ತಾನ್ ಆಫ್ ಜೊಹೋರ್ ಕಪ್‌ ನಲ್ಲಿ ಗಮನಾರ್ಹ ಪ್ರದರ್ಶನ ನೀಡಿತ್ತು.

ಭಾರತ ತಂಡವು ‘ಬಿ’ ಗುಂಪಿನಲ್ಲಿ ಚಿಲಿ, ಸ್ವಿಟ್ಸರ್‌ಲ್ಯಾಂಡ್ ಹಾಗೂ ಓಮಾನ್ ತಂಡಗಳೊಂದಿಗೆ ಸ್ಥಾನ ಪಡೆದಿದೆ.

ತಂಡದಲ್ಲಿ ಗೋಲ್‌ಕೀಪರ್‌ ಗಳಾದ ಬಿಕ್ರಮ್‌ಜೀತ್ ಸಿಂಗ್ ಹಾಗೂ ಪ್ರಿನ್ಸ್‌ದೀಪ್ ಸಿಂಗ್, ಅನುಭವಿಗಳಾದ ಡಿಫೆಂಡರ್ ಅಮಿರ್ ಅಲಿ ಅವರಿದ್ದಾರೆ. ಗುರ್ಜೊತ್ ಒಳಗೊಂಡ ಯುವ ಫಾರ್ವರ್ಡ್‌ಗಳು ಹಾಗೂ ಸಮತೋಲಿತ ಮಿಡ್ ಫೀಲ್ಡರ್‌ ಗಳಿದ್ದಾರೆ.

ಭುಜನೋವಿನಿಂದಾಗಿ ಸ್ಟಾರ್ ಸ್ಟ್ರೈಕರ್ ಅರೈಜೀತ್ ಸಿಂಗ್ ತಂಡದಿಂದ ಹೊರಗುಳಿದಿದ್ದಾರೆ.

►ಭಾರತೀಯ ಜೂನಿಯರ್ ಪುರುಷರ ಹಾಕಿ ತಂಡ

ಗೋಲ್‌ಕೀಪರ್‌ ಗಳು: ಬಿಕ್ರಮ್‌ಜೀತ್ ಸಿಂಗ್, ಪ್ರಿನ್ಸ್‌ದೀಪ್ ಸಿಂಗ್

► ಡಿಫೆಂಡರ್‌ ಗಳು: ರೋಹಿತ್, ಟಲೆಮ್ ಪ್ರಿಯೊಬಾರ್ತ, ಅನ್ಮೋಲ್ ಎಕ್ಕಾ,ಆಮಿರ್ ಅಲಿ, ಸುನೀಲ್ ಪಾಲಾಕ್ಷಪ್ಪ ಬೆನ್ನೂರ್, ಶಾರ್ದಾನಂದ ತಿವಾರಿ.

► ಮಿಡ್ ಫೀಲ್ಡರ್‌ ಗಳು: ಅಂಕಿತ್ ಪಾಲ್, ಇಂಗ್ಲೆಂಬಾ ಲುವಾಂಗ್, ಅದ್ರೋಹಿತ್ ಎಕ್ಕಾ, ರೋಶನ್ ಕುಜುರ್, ಮನ್‌ಮೀತ್ ಸಿಂಗ್, ಗುರ್ಜೋತ್ ಸಿಂಗ್.

► ಫಾರ್ವರ್ಡ್‌ಗಳು: ಅರ್ಷದೀಪ ಸಿಂಗ್, ಸೌರಭ್ ಆನಂದ್ ಕುಶ್ವಾಹ, ಅಜೀತ್ ಯಾದವ್, ದಿಲ್‌ರಾಜ್ ಸಿಂಗ್

►  ಮೀಸಲು ಆಟಗಾರರು: ರವ್ನೀತ್ ಸಿಂಗ್,ರೋಹಿತ್ ಕುಲ್ಲು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News